Advertisement
ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಮರ್ದಾಳ ಪೇಟೆ ಅಭಿವೃದ್ಧಿಹೊಂದುತ್ತಿರುವ ಪ್ರದೇಶವಾಗಿದ್ದು, ಪೇಟೆಯೂ ಬೆಳೆಯುತ್ತಿದೆ. ದಿನಂಪ್ರತಿ ಯಾತ್ರಾರ್ಥಿಗಳು ಸೇರಿದಂತೆ ಸಾವಿರಾರು ಜನರ ಮರ್ದಾಳದ ಮೂಲಕ ಈ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದು ಮರ್ದಾಳ ಪೇಟೆಯಲ್ಲಿ ಪಂಚಾಯತ್ ಕಚೇರಿಯ ಕೂಗಳತೆಯ ದೂರದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ ಆ ಶೌಚಾಲಯವನ್ನು ಸಮರ್ಪಕವಾಗಿ ಶುಚಿಗೊಳಿಸದೇ ಇರುವುದ ರಿಂದ ಶೌಚಾಲಯವನ್ನು ಉಪ ಯೋಗಿಸುವುದು ಬಿಡಿ, ಆ ಪ್ರದೇಶದಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ ಎನ್ನುತ್ತಾರೆ ಸ್ಥಳೀಯ ಮುಂದಾಳು ಭವಾನಿಶಂಕರ ಅವರು.
ನೀರಿನ ಒರತೆಯಿಂದಾಗಿ ಶೌಚಾಲಯದ ಗುಂಡಿಯಲ್ಲಿ ನೀರು ತುಂಬಿಕೊಂಡು ಗಲೀಜು ನೀರು ಶೌಚಾಲಯದೊಳಗೆ ಉಕ್ಕುತ್ತಿರುವುದರಿಂದಾಗಿ ಸಮಸ್ಯೆ ಎದುರಾಗಿದೆ. ಸ್ವಚ್ಛತಾ ಕಾರ್ಮಿಕರು ಕೂಡ ಮಳೆ ಕಡಿಮೆಯಾಗಿ ನೀರಿನ ಒರತೆ ಕಡಿಮೆಯಾಗುವ ತನಕ ಏನೂ ಮಾಡಲು ಸಾಧ್ಯವಿಲ್ಲವೆಂದು ಕೈಚೆಲ್ಲಿದ್ದಾರೆ. ಆದುದರಿಂದ ಮಳೆ ಕಡಿಮೆಯಾದ ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
– ಲಲಿತಾ ಎಂ. ರೈ, ಅಧ್ಯಕ್ಷರು, ಮರ್ದಾಳ ಗ್ರಾ.ಪಂ.