Advertisement

ಮಾ. 4-26: ವನಿತಾ ಪ್ರೀಮಿಯರ್‌ ಲೀಗ್‌: ಮುಂಬೈ-ಗುಜರಾತ್‌ ಮೊದಲ ಪಂದ್ಯ

11:49 PM Feb 14, 2023 | Team Udayavani |

ಹೊಸದಿಲ್ಲಿ: ವನಿತಾ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ನಡೆದ 24 ಗಂಟೆಗಳಲ್ಲಿ ಬಿಸಿಸಿಐ ಚೊಚ್ಚಲ “ವನಿತಾ ಪ್ರೀಮಿಯರ್‌ ಲೀಗ್‌’ ಕ್ರಿಕೆಟ್‌ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಬಹು ನಿರೀಕ್ಷೆಯ ಈ ಟಿ20 ಲೀಗ್‌ ಮಾರ್ಚ್‌ 4ರಿಂದ 26ರ ತನಕ ನಡೆಯಲಿದೆ.

ಎಲ್ಲ ಪಂದ್ಯಗಳು ಮುಂಬಯಿಯ ಬ್ರೆಬೋರ್ನ್ ಸ್ಟೇಡಿಯಂ ಹಾಗೂ ಡಿ.ವೈ. ಪಾಟೀಲ್‌ ಸ್ಟೇಡಿಯಂನಲ್ಲಿ ನಡೆಯ
ಲಿವೆ. ಮಾ. 4ರ ಉದ್ಘಾಟನ ಪಂದ್ಯದಲ್ಲಿ ಮುಂಬೈ-ಗುಜರಾತ್‌ ಮುಖಾಮುಖಿ ಆಗಲಿವೆ. ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿಯನ್ನು ಎದುರಿಸಲಿದೆ.

ರೌಂಡ್‌ ರಾಬಿನ್‌ ಲೀಗ್‌ ಮಾದ ರಿಯ ಈ ಪಂದ್ಯಾವಳಿ ಎರಡು ಸುತ್ತುಗಳಲ್ಲಿ ನಡೆಯಲಿದೆ.

ಮೊದಲ ಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ ತಲುಪಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಇಲ್ಲಿ ಗೆದ್ದ ತಂಡ ದ್ವಿತೀಯ ತಂಡವಾಗಿ ಪ್ರಶಸ್ತಿ ಸುತ್ತಿನಲ್ಲಿ ಹೋರಾಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next