Advertisement

ಮಾ. 3: ದೇವೇಗೌಡ ಮಂಗಳೂರಿಗೆ

01:10 AM Feb 28, 2019 | |

ಮಂಗಳೂರು: ಬೆಂಗಳೂರಿನ ಮಹಾತ್ಮಾ ಗಾಂಧಿ ಶಾಂತಿ ಸೌಹಾರ್ದ ವೇದಿಕೆಯ ಆಶ್ರಯದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಚೇತನಗಳಾದ ದಿ| ಕುರ್ನಾಡು ರಾಮಯ್ಯ ನಾಯ್ಕ ಹಾಗೂ ದಿ| ಮಹಿಮ್‌ ಕುಮಾರ್‌ ಹೆಗ್ಡೆ ಅವರ “ನೆನಪು’ ಕಾರ್ಯಕ್ರಮ ಮಾ. 3ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ಆಯೋಜಿಸಿದ್ದು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಚಾಲನೆ ನೀಡಲಿದ್ದಾರೆ ಎಂದು ಮಹಾತ್ಮಾ ಗಾಂಧಿ ಶಾಂತಿ ಸೌಹಾರ್ದ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ರವಿಶಂಕರ ಶೆಟ್ಟಿ ತಿಳಿಸಿದ್ದಾರೆ.

Advertisement

ರಾಮಯ್ಯ ನಾಯ್ಕ ಅವರು ಜಿಲ್ಲೆಯ ಸಮಾಜ ಸೇವಾ ರತ್ನರಾಗಿ ಖ್ಯಾತರಾಗಿದ್ದವರು. ಜಿಲ್ಲೆಯ ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿ ಅವರು ಕೈಜೋಡಿಸಿದ್ದರು. ಈ ಕಾರಣದಿಂದ ಇಬ್ಬರು ಮಹನೀ ಯರ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸುರೇಶ್ಚಂದ್ರ ಶೆಟ್ಟಿ, ದಿನೇಶ್‌ ಕುಂಪಲ, ನಝೀರ್‌ ಉಳ್ಳಾಲ್‌, ಶ್ರೀನಿವಾಸ ಶೆಟ್ಟಿ, ಯೋಗೀಶ್‌ ಶೆಟ್ಟಿ
ಜಪ್ಪು, ಇಬ್ರಾಹಿಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next