Advertisement
ಕಾಪು ರಾಜೀವ ಭವನದಲ್ಲಿ ಮಾ. 17ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಅಧಿಕಾರಾವಧಿಯಲ್ಲಿ ತಂದ ಅನುದಾನವನ್ನು ಬೇರೆಡೆ ವರ್ಗಾಯಿಸಿ ಅದಕ್ಕೆ ಗುದ್ದಲಿ ಪೂಜೆ ನಡೆಸುವುದು, ಫ್ಲೆಕ್ಸ್ ಹಾಕಿಸುವಂತಹ ಕೆಲಸ ಮಾತ್ರ ಹಾಲಿ ಶಾಸಕರಿಂದ ನಡೆಯುತ್ತಿದೆ. ಅದು ಹೊರತು ಬೇರೇನೂ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ಆಗ್ರಹಿಸಿ ಪ್ರತಿಭಟನೆ
ಕಾಪು ಪುರಸಭೆಗೆ ಮಂಜೂರಾದ ಅನುದಾನ ಬೇರೆಡೆ ವರ್ಗಾವಣೆಯಾಗುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ. ನಗರೋತ್ಥಾನ ಕಾಮಗಾರಿಗಳು ಕಳಪೆ ರೀತಿಯಲ್ಲಿ ನಡೆಯುತ್ತಿದ್ದು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಅದರ ಜತೆಗೆ ಕಾಮಗಾರಿಗಳ ವಿಳಂಬ, ಕಾಮಗಾರಿಯ ಬದಲಾಯಿಸುವಿಕೆ, ಅನುದಾನ ವರ್ಗಾವಣೆ ಸಹಿತವಾಗಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಮಾ. 26ರಂದು ಪ್ರತಿಭಟನೆ ನಡೆಯಲಿದೆ ಎಂದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಸುವರ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾದಿಕ್, ಪಕ್ಷದ ಮುಖಂಡರಾದ ಡಾ| ದೇವಿಪ್ರಸಾದ್ ಶೆಟ್ಟಿ, ಮನಹರ್ ಇಬ್ರಾಹಿಂ, ಹರೀಶ್ ನಾಯಕ್, ದೀಪಕ್ ಎರ್ಮಾಳ್, ಸುನೀಲ್ ಬಂಗೇರ, ಅಮೀರುದ್ದೀನ್, ಪುರಸಭಾ ಸದಸ್ಯರಾದ ಕೆ. ಎಚ್. ಉಸ್ಮಾನ್, ಅಬ್ದುಲ್ ಹಮೀದ್, ಶಾಬು ಸಾಹೇಬ್, ಮಹಮ್ಮದ್ ಇಮ್ರಾನ್, ಸುರೇಶ್ ದೇವಾಡಿಗ, ಮಾಲಿನಿ ಶೆಟ್ಟಿ, ಸೌಮ್ಯ, ವಿಜಯಲಕ್ಷಿ$¾, ಅಶ್ವಿನಿ, ಸುಲೋಚನಾ ಬಂಗೇರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.