ಹೊಸದಿಲ್ಲಿ / ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನವೇ ಕರ್ನಾಟಕದಲ್ಲಿ ಧುತ್ತನೇ ಮತ್ತೂಂದು ಹೈವೋಲ್ಟೆಜ್ ರಾಜ್ಯಸಭಾ ಚುನಾವಣಾ ಸಮರಕ್ಕೆ ವೇದಿಕೆ ಸಿದ್ಧವಾಗಿದೆ.
ಮಾರ್ಚ್ 23ರಂದು ರಾಜ್ಯದ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿವೃತ್ತಿಯಾಗಲಿರುವವರ 58 ಸ್ಥಾನ ಭರ್ತಿ ಮಾಡಲು ಈ ಚುನಾವಣೆ ನಡೆಯಲಿದೆ. ಅಲ್ಲದೆ ಕೇರಳದ ಒಂದು ಸ್ಥಾನಕ್ಕೆ ಉಪಚುನಾವಣೆಯೂ ನಡೆಯಲಿದೆ.
ಕರ್ನಾಟಕದಿಂದ ಸ್ವತಂತ್ರ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿಯ ಆರ್.ರಾಮಕೃಷ್ಣ, ಬಸವರಾಜ ಪಾಟೀಲ್ ಸೇಡಂ ಮತ್ತು ಕಾಂಗ್ರೆಸ್‌ನ ರೆಹಮಾನ್ ಖಾನ್ ಎ. 2ರಂದು ನಿವೃತ್ತಿಯಾಗಲಿದ್ದಾರೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಕಾಂಗ್ರೆಸ್ ಎರಡು, ಬಿಜೆಪಿ ಒಂದು ಮತ್ತು ಇನ್ನೊಂದು ಸ್ಥಾನಕ್ಕೆ ಪ್ರಬಲವಾದ ಪೈಪೋಟಿ ಇದೆ. ಅಂದರೆ, ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಉಳಿಯುವ ಹೆಚ್ಚುವರಿ ಮತಗಳಿಂದ ಮತ್ತೂಬ್ಬರು ಆಯ್ಕೆಯಾಗಬಹುದು. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಖಾಲಿಯಾಗು ಒಂದು ಸ್ಥಾನದ ಜತೆಗೆ ಮತ್ತೂಂದು ಸ್ಥಾನಗಳಿಸಿಕೊಂಡರೆ, ಬಿಜೆಪಿ ಖಾಲಿಯಾಗುವ ಎರಡರಲ್ಲಿ ಒಂದು ಸ್ಥಾನ ಕಳೆದುಕೊಳ್ಳಲಿದೆ. ಸದ್ಯ ಸ್ವತಂತ್ರ ಸದಸ್ಯರಾಗಿರುವ ರಾಜೀವ್ ಚಂದ್ರ ಶೇಖರ್ ಅವರಿಂದ ತೆರವಾದ ಸ್ಥಾನಕ್ಕೆ ಯಾರು ಎಂಬ ಚರ್ಚೆ ಶುರುವಾಗಿದೆ.
ಮೋದಿ ಸಂಪುಟ ಸದಸ್ಯರ ನಿವೃತ್ತಿ: ಮಾ. 23ರಂದು 58 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಸಚಿವರಾದ ಅರುಣ್ ಜೇಟಿÉ, ರವಿ ಶಂಕರ್ ಪ್ರಸಾದ್, ಪ್ರಕಾಶ್ ಜಾಬ್ಡೇ ಕರ್, ಜೆ.ಪಿ. ನಡ್ಡಾ, ತಾವರ್‌ಚಂದ್ ಗೆಹೊÉàಟ್ ಅವರ ಅವಧಿ ಎ.2ರಂದೇ ಅಂತಿಮಗೊಳ್ಳಲಿದೆ. ಇನ್ನು ಕಾಂಗ್ರೆ ಸ್‌ನಿಂದ ಆಂಧ್ರದ ಚಿರಂಜೀವಿ, ರೇಣುಕಾ ಚೌಧರಿ, ರಾಜೀವ್ ಶುಕ್ಲಾ, ಉತ್ತರ ಪ್ರದೇಶದಲ್ಲಿ ಎಸ್ಪಿಯ ನರೇಶ್ ಅಗರ್ವಾಲ್, ಜಯಾ ಬಚ್ಚನ್, ಬಿಎಸ್‌ಪಿಯ ಮಾಯಾವತಿ ಅವಧಿಯೂ ಅಂತ್ಯಗೊಳ್ಳಲಿದೆ. ನಾಮ ನಿರ್ದೇಶಿತ ಸದಸ್ಯರಾದ ಕ್ರಿಕೆಟಿಗ ತೆಂಡೂಲ್ಕರ್, ನಟಿ ರೇಖಾ, ಆರ್ಥಿಕ ತಜ್ಞ ಅನು ಆಗ ಅವರ ಅವಧಿಯೂ ಎ. 26ರಂದು ಅಂತ್ಯವಾಗಲಿದೆ. ಈ ಮೂರು ಸ್ಥಾನಗಳೂ ಬಿಜೆಪಿ ಪಾಲಿಗೆ ಹೊಸದಾಗಿ ಸಿಗಲಿವೆ.