Advertisement

ಘಾನಾದಲ್ಲಿ “ಮಾರ್ಬರ್ಗ್‌’ಭೀತಿ: ಇಬ್ಬರಿಗೆ ಸೋಂಕು, ಸರ್ಕಾರದಿಂದ ಕಠಿಣ ಕ್ರಮ ಜಾರಿ

09:26 PM Jul 18, 2022 | Team Udayavani |

ಅಕ್ರಾ: ಆಫ್ರಿಕಾ ರಾಷ್ಟ್ರಗಳಲ್ಲಿ ಕೆಲವು ವರ್ಷಗಳ ಹಿಂದೆ ಮರಣ ಮೃದಂಗ ಬಾರಿಸಿದ್ದ ಎಬೊಲಾ ಕಾಯಿಲೆ ಮಾದರಿಯ ಮತ್ತೊಂದು ಕಾಯಿಲೆ “ಮಾರ್ಬರ್ಗ್‌’ ವೈರಾಣು ಸೋಂಕು ಕಾಣಿಸಿಕೊಂಡಿದೆ.

Advertisement

ಆಫ್ರಿಕಾದ ಪಶ್ಚಿಮ ರಾಷ್ಟ್ರಗಳಲ್ಲೊಂದಾದ ಘಾನಾ ದೇಶದಲ್ಲಿ ಮಾರ್ಬರ್ಗ್‌ ವೈರಾಣು ಸೋಂಕಿಗೆ ಒಳಗಾದ ಎರಡು ಪ್ರಕರಣಗಳು ಪತ್ತೆಯಾಗಿವೆ.

ಜು. 10ರಂದು ಇಬ್ಬರಲ್ಲಿ ಈ ಸೋಂಕು ದೃಢಪಟ್ಟಿತ್ತು. ಆದರೆ, ಸೋಂಕಿತರಿಂದ ಪಡೆದ ಸ್ಯಾಂಪಲ್‌ಗ‌ಳನ್ನು ಹೆಚ್ಚಿನ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ, ಇವು ಮಾರ್ಬರ್ಗ್‌ ವೈರಾಣು ಸೋಂಕು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಘಾನಾ ಆರೋಗ್ಯ ಇಲಾಖೆ ಹೇಳಿದೆ.

ತಕ್ಷಣವೇ ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯೂಎಚ್‌ಒ) ಮಾಹಿತಿ ನೀಡಲಾಗಿದೆ. ಜೊತೆಗೆ, ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಈಗ ಸೋಂಕಿಗೆ ಒಳಗಾಗಿರುವ ವ್ಯಕ್ತಿಗಳಿಂದ ಮತ್ತೊಬ್ಬರಿಗೆ ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಘಾನಾ ಆರೋಗ್ಯ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next