Advertisement
ಬೆಳಗ್ಗೆ ದೇವಸ್ಥಾನದ ಆರಾಧ್ಯ ದೇವರಾದ ಶ್ರೀ ವರಾಹ, ವಿಷ್ಣು, ನಾರಸಿಂಹ ಮತ್ತು ಸನಿಹದ ಗಂಗಾಧರೇಶ್ವರ ಸನ್ನಿಧಿಯಲ್ಲಿ ಮಹಾಗಣಪತಿ ಹವನ, ಚಂಡಿಕಾ ಹವನ, ಏಕಾದಶರುದ್ರ ಹವನ, ಕಲಶಾಭಿಷೇಕ ಹೋಮ, ಮಹಾಪೂಜೆ, ಉತ್ಸವಗಳು ನಡೆದವು.
ದೇವಸ್ಥಾನದಲ್ಲಿ ಸಕಾಲದಲ್ಲಿ ಮಳೆಗಾಗಿ, ಪ್ರವಾಹ ಬಂದು ಬೆಳೆ ನಾಶವಾಗದಂತೆ ಹಾಗೂ ಮೀನುಗಾರರು ಮೀನುಗಾರಕೆ ನಡೆಸುವಾಗ ಯಾವುದೇ ತೊಂದರೆ ಯಾದಂತೆ ಪ್ರಾರ್ಥಿಸುವ ಸಲುವಾಗಿ ಅಭಾರಿ ಸೇವೆ ನಡೆಸಲಾಗುತ್ತಿದೆ. ದೇವಸ್ಥಾನದ ಎದುರು ಭಾಗದಲ್ಲಿ ನದಿಯ ನೆಗಳನ (ಮೊಸಳೆ) ಗುಂಡಿಗೆ ನೈವೇದ್ಯ ಸಮರ್ಪಿಸುವ ಮೂಲಕ ಸೇವೆ ನಡೆಸಲಾಗುತ್ತದೆ. ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಮರವಂತೆ ಮೀನುಗಾರರು ಸಹಕರಿಸಿದರು.