Advertisement

ಮರವಂತೆ ಮೇಲ್‌ಸೇತುವೆ: ಸಂಚಾರ ಮುಕ್ತ

01:05 PM Mar 13, 2017 | Team Udayavani |

ಕುಂದಾಪುರ: ನದಿ -ಕಡಲಿನ ಸಂಗಮವನ್ನು ಬೇರ್ಪ ಡಿಸುವ ಸುಂದರ ಹಾಗೂ ಪ್ರಖ್ಯಾತ ಮರವಂತೆ ಕಡಲ ತೀರದ ಪಕ್ಕದಲ್ಲೇ ಹಾದುಹೋಗುವ ರಾ.ಹೆ. 66ರಲ್ಲಿ  ಚತುಷ್ಪಥ ಕಾಮಗಾರಿಯ ವೇಳೆ ನಿರ್ಮಿಸಲಾದ ಮೇಲ್ಸೇತುವೆಯಲ್ಲಿ ಸಂಚಾರ ಮುಕ್ತಗೊಳಿಸಲಾಗಿದೆ.

Advertisement

ಕುಂದಾಪುರದಿಂದ ಕಾರವಾರದ ತನಕ  ಹೆದ್ದಾರಿ ವಿಸ್ತರಣೆಯ ವೇಳೆ  ಗುತ್ತಿಗೆದಾರರಿಗೆ ಈ ಸ್ಥಳದಲ್ಲಿ ಚತು ಷ್ಪಥ ಹೆದ್ದಾರಿಯನ್ನು ನಿರ್ಮಿಸುವಾಗ ಸ್ಥಳಾವಕಾಶದ ಕೊರತೆಯಿಂದ  ಇಲ್ಲಿ ಹರಿಯುತ್ತಿರುವ  ನದಿಯ ಅಂಚಿನಲ್ಲಿ   ನದಿಗೆ ಪಿಲ್ಲರ್‌ ಅಳವಡಿಸಿ ನಿರ್ಮಿಸಲಾದ ಈ ಸೇತುವೆ  ಕಾಮಗಾರಿ ಕಳೆದ ತಿಂಗಳು ಪೂರ್ಣ ಗೊಂಡಿದ್ದು  ಇದನ್ನು ಸಂಪರ್ಕಿಸುವ ಸಂಪರ್ಕ ರಸ್ತೆಯ ಕಾಮಗಾರಿ ಮುಗಿದ ಬಳಿಕ ಈ ರಸ್ತೆಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.  ಇದರ ಇನ್ನೊಂದು ಪಾರ್ಶ್ವದಲ್ಲಿ ಹೆದ್ದಾರಿ ಕಾಮಗಾರಿ ಆರಂಭ ವಾಗಬೇಕಾಗಿರುವುದರಿಂದ  ಈ  ಮೇಲ್ಸೇತುವೆಯಲ್ಲಿ ಸಂಚಾರ ಮುಕ್ತ ಗೊಳಿಸಲಾಗಿದೆ ಎನ್ನುವುದು ಐಆರ್‌ಬಿ ಎಂಜಿನಿಯರ್‌ಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next