Advertisement
ಡಯೋಸಿಸ್‌ನ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜಿಗೆ ಪ್ರವೇಶ ನೀಡಲು ಕ್ಯಾಪಿಟೇಶನ್ ಶುಲ್ಕವನ್ನು ಪಡೆದಿರುವ ಮತ್ತು ದತ್ತಿಗಾಗಿ ಸಂಗ್ರಹಿಸಲಾದ ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಬಿಷಪ್ ಮನೆ, ಕಚೇರಿಗಳಲ್ಲಿ ಮ್ಯಾರಥಾನ್ ಶೋಧ ಕಾರ್ಯ ನಡೆಸಲಾಗಿದೆ.
ಸಾಮೂಹಿಕ ಪ್ರಾರ್ಥನೆ(ಮಾಸ್) ವೇಳೆ ಸಮಾನ ವಿಧಾನವನ್ನು ಪಾಲಿಸುವಂತೆ ಸೂಚಿಸಿದ್ದರೂ ಅದನ್ನು ಜಾರಿ ಮಾಡಿಲ್ಲ ಎಂಬ ಕಾರಣಕ್ಕಾಗಿ ವ್ಯಾಟಿಕನ್ ಕೇರಳದ ಎರ್ನಾಕುಳಂ ಆರ್ಚ್‌ಬಿಷಪ್ ಆ್ಯಂಟನಿ ಕರಿಯಿಲ್ ಅವರ ರಾಜೀನಾಮೆ ಕೇಳಿದೆ. ವ್ಯಾಟಿಕನ್‌ನಡಿ ಬರುವ ಪ್ರಮುಖ ಚರ್ಚುಗಳಲ್ಲಿ ಒಂದಾದ ಕೇರಳ ಮೂಲದ ಸೈರೋ ಮಲಬಾರ್ ಚರ್ಚ್ ಕಳೆದ ವರ್ಷದ ನವೆಂಬರ್‌ನಿಂದಲೇ ಎಲ್ಲ ಡಯೋಸಿಸ್‌ನಲ್ಲೂ ಸಮಾನ ಮಾದರಿಯ ಮಾಸ್ ಅನ್ನು ಪರಿಚಯಿಸಿತ್ತು. ಆದರೆ, ಅದನ್ನು ಪಾಲಿಸದ ಕಾರಣ ಕರಿಯಿಲ್‌ರನ್ನು ತೆಗೆದುಹಾಕಲು ವ್ಯಾಟಿಕನ್ ನಿರ್ಧರಿಸಿದೆ.