Advertisement

ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರ :  ಕಲಿಕಾ ವರ್ಗದ ಫಲಿತಾಂಶ ಪ್ರಕಟ

02:22 PM Aug 03, 2018 | |

ಪುಣೆ: ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರ ಪುಣೆ ಇದರ 2017-2018 ನೇ ಶೈಕ್ಷಣಿಕ ಸಾಲಿನ ಪ್ರಗತ ಕನ್ನಡ ಕಲಿಕಾ ವರ್ಗದ ಫಲಿತಾಂಶ ಪ್ರಕಟಗೊಂಡಿದ್ದು, ಶೇ. 100 ಫಲಿತಾಂಶ ಲಭಿಸಿದೆ.

Advertisement

ಉತ್ಕರ್ಷ್‌ ಕುಲಕರ್ಣಿ ಅವರು ಶೇ. 91.05 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದರೆ, ನಿಲೀಮಾ ಅಂತರಕರ ಅವರು ಶೇ. 91 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಸುಲಭಾ ಇಂಗಳೇಶ್ವರ ಇವರು ಶೇ. 90.05 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಇತರ ವಿದ್ಯಾರ್ಥಿಗಳು ಕೂಡಾ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಈ ವರ್ಷ ಪುಣೆಯ ಕನ್ನಡ ಕಲಿಕಾ ವರ್ಗವು ಬೆಳ್ಳಿಹಬ್ಬದ ಸಡಗರದಲ್ಲಿದೆ. ಕನ್ನಡ ಕಲಿಕಾ ವರ್ಗದಲ್ಲಿ ಕಲಿತು ಉತ್ತೀರ್ಣರಾದ ವಿದ್ಯಾರ್ಥಿಗಳ ಸತತ ಒತ್ತಾಯದ ಮೇರೆಗೆ ಕನ್ನಡದ ಭೀಷ್ಮ ನಾಡೋಜ ಪಾಟೀಲ ಪುಟ್ಟಪ್ಪನವರ ಹಸ್ತದಿಂದ 2004 ರಲ್ಲಿ ಪ್ರಗತ ಕನ್ನಡ ಕಲಿಕಾ ವರ್ಗವನ್ನು ಆರಂಭಿಸಲಾಯಿತು. ಕನ್ನಡ ಭಾಷೆಯಲ್ಲಿ ಅಭಿರುಚಿ ಬೆಳೆಸುವುದರ ಜೊತೆಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯಲ್ಲಿ ವಿಶೇಷ ಆಸಕ್ತಿಯನ್ನು ಕನ್ನಡೇತರರಲ್ಲಿ ಬೆಳೆಸುವುದು ಕೇಂದ್ರದ ಪ್ರಮುಖ ಧ್ಯೇಯೋದ್ದೇಶವಾಗಿದೆ.

ಪುಣೆಯ ಪರಿಸರದಲ್ಲಿರುವ ಕನ್ನಡ, ತುಳು ಬಾರದವರಿಗಾಗಿ ಮತ್ತು ಕನ್ನಡೇತರರಿಗಾಗಿ ಕನ್ನಡ ಕಲಿಕಾ ವರ್ಗವನ್ನು ಆರಂಭಿಸಲಾಗಿದ್ದು, ಪ್ರಸ್ತುತ ಸಾಲಿನ  ಪ್ರವೇಶವನ್ನು ಪಡೆಯಲಿಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ 9890391552, 9881998735 ಈ ನಂಬರುಗಳನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next