Advertisement

Actor Atul Parchure; ಖ್ಯಾತ ನಟ ಅತುಲ್ ಪರ್ಚುರೆ ವಿಧಿವಶ

09:34 PM Oct 14, 2024 | Team Udayavani |

ಮುಂಬಯಿ: ಖ್ಯಾತ ನಟ ಅತುಲ್ ಪರ್ಚುರೆ ಅವರು 57 ನೇ ವಯಸ್ಸಿನಲ್ಲಿ ಸೋಮವಾರ(ಅ14) ನಿಧನ ಹೊಂದಿದ್ದಾರೆ. ಮರಾಠಿ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ ಪರ್ಚುರೆ ಅವರು ಸೂರ್ಯಾಚಿ ಪಿಳ್ಳೆ ಎಂಬ ಸ್ಟೇಜ್ ಶೋನಲ್ಲಿ ಕೆಲಸ ಮಾಡುವಾಗ ಅವರ ಆರೋಗ್ಯ ಹದಗೆಟ್ಟಿತ್ತು.

Advertisement

ಹಲವಾರು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ನಟ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಾಯಿ, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಅತುಲ್ ಪರ್ಚುರೆ ಚಲನಚಿತ್ರಗಳು ಮಾತ್ರವಲ್ಲದೆ ದೂರದರ್ಶನ ಧಾರಾವಾಹಿಗಳು ಮತ್ತು ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದರು. ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಅತುಲ್ ಅವರು ತೆಲುಗು ಚಿತ್ರಗಳಲ್ಲೂ ನಟಿಸಿದ್ದರು. ಖ್ಯಾತ ನಟರೊಂದಿಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಪರ್ಚುರೆ ನಿಧನಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next