ಮಹಾನಗರ: ಆರ್ಯ ಯಾನೆ ಮರಾಠ ಸಮಾಜ ಸಂಘ ಪೂರ್ವ ವಲಯ ಹಾಗೂ ಅಂಬಾ ಭವಾನಿ ಗೇಮ್ಸ್ ಟೀಮ್ ಬಜಾಲ್ ಜಲ್ಲಿಗುಡ್ಡೆ ಇವುಗಳ ಜಂಟಿ ಆಶ್ರಯದಲ್ಲಿ ಪುರುಷರಿಗೆ ಸೂಪರ್ ಸಿಕ್ಸ್ ಕ್ರಿಕೆಟ್ (ಅಂಡರ್ಮ್)ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟವನ್ನು ಜಲ್ಲಿಗುಡ್ಡೆ ಪರಿಸರದ ಎ.ಬಿ.ಜಿ.ಟಿ. ಮೈದಾನಿನಲ್ಲಿ ಆಯೋಜಿಸಲಾಯಿತು.
ರಾಷ್ಟ್ರೀಯ ಈಜುಪಟು ದಯಾನಂದ ಜಗತ್ತಾಪ್ ಉದ್ಘಾಟಿಸಿದರು. ಸಂಜೆ ನಡೆದ ವಲಯ ಸಮಾವೇಶ ಹಾಗೂ ಸಮಾರೋಪ ಸಂದರ್ಭ ಮರಾಠರ ಆಚಾರ ವಿಚಾರದ ಕುರಿತು ದಯಾನಂದ ಜಿ. ಕತ್ತಲ್ ಸಾರ್ ದಿಕ್ಸೂಚಿ ಭಾಷಣ ಮಾಡಿದರು.
ವಲಯದ ಹಾಗೂ ಅಂಬಾ-ಭವಾನಿ ಸ್ವ ಸಹಾಯ ಸಂಘದ ವರದಿಯನ್ನು ಮಂಡಿಸಲಾಯಿತು. ಸಮಾಜದ ಹಿರಿಯರಾದ ಮೀನಾಕ್ಷಿ ಜಗತ್ತಾಪ್ ಅವರನ್ನು ಸಮ್ಮಾನಿಸಲಾಯಿತು. ಅನಾರೋಗ್ಯದ ಕಾರಣ ನಿಶಾ ಧನಂಜಯ್ ಅವರಿಗೆ ಹಣದ ನೆರವು ವಿತರಿಸಲಾಯಿತು.
ಕ್ರಿಕೆಟ್ ಪಂದ್ಯದಲ್ಲಿ ಮರಾಠ ಬ್ರಿಗೇಡ್ ಕಾರ್ಕಳ ತಂಡ 12,012ರೂ. ನಗದಿನೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಚೇತನ ಕುಂಟಾರ್ ತಂಡ 9,009ರೂ. ನಗದಿನೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಮಹಿಳೆಯರ ತ್ರೋಬಾಲ್ ಪಂದ್ಯದಲ್ಲಿ ಛತ್ರಪತಿ ಪಡೀಲ್ ತಂಡ 8,008 ರೂ. ನಗದು ಪಡೆದು ಪ್ರಥಮ ಸ್ಥಾನಿಯಾದರೆ, ಯುವ ಮರಾಠ ಕುಂಪಲ ತಂಡ 4,004ರೂ. ನಗದಿನೊಂದಿಗೆ ದ್ವಿತೀಯ ಸ್ಥಾನ ಪಡೆಯಿತು.
ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷರಾದ ದೇವೋಜಿ ರಾವ್ ಜಾಧವ್, ಕಾರ್ಪೊರೇಟ್ ವಿಜಯ್ ಕುಮಾರ್ ಶೆಟ್ಟಿ, ಯುವ ವೇದಿಕೆ ಸಂಚಾಲಕ ಲೋಕೇಶ್ ಬಹುಮಾನ್, ಮಹಿಳಾ ಸಂಚಾಲಕಿ ಆಶಾಲತಾ ಸಪ್ಟೇಕರ್, ಸುರೇಶ್ ರಾವ್ ಲಾಡ್, ನಾಗೇಶ್ವರ ಪವಾರ್, ರಾಜೇಶ್ ಪಾಟೀಲ್, ಗಿರೀಶ್ ಬೋಂಸ್ಲೆ, ಚಂದ್ರಶೇಖರ ಪಾಟೀಲ್, ಕೀರ್ತನ್ ಕುಮಾರ್ ಲಾಡ್ ಮುಂತಾದವರು ಉಪಸ್ಥಿತರಿದ್ದರು. ಸುಧಾಕರ ಸ್ವಾಗತಿಸಿದರು. ಹೇಮ್ ರಾಜ್ ವಂದಿಸಿದರು. ಸುರೇಶ್ ಅವರು ಕಾರ್ಯಕ್ರಮ ನಿರೂಪಿಸಿದರು.