Advertisement
ಮಾರಣಕಟ್ಟೆ ಹಾಗೂ ಸುತ್ತಮುತ್ತಲಿನ ಊರಿನ ನೂರಾರು ವಿದ್ಯಾರ್ಥಿಗಳು ಶಂಕರನಾರಾಯಣ ಕಾಲೇಜಿಗೆ ತೆರಳಲು ಬಸ್ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವ ಕುರಿತು ಶಾಸಕ ಸುಕುಮಾರ್ ಶೆಟ್ಟರಲ್ಲಿ ಬಸ್‌ಆರಂಭಿಸಲು ಆಗ್ರಹಿಸಿದ್ದರು. ಈ ಕುರಿತಂತೆ ಕಾರ್ಯಪ್ರವೃತ್ತರಾದ ಶಾಸಕರು, ಕೆಎಸ್‌ಆರ್‌ಟಿಸಿ ಡಿಸಿ, ಪ್ರಾದೇಶಿಕ ಸಾರಿಗೆ ಆಯುಕ್ತ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತುರ್ತಾಗಿ ಬಸ್ ಆರಂಭಿಸಲು ಸೂಚಿಸಿದರು. ಅದರಂತೆ ಜ. 14ರಿಂದ ಮಾರಣಕಟ್ಟೆ- ಶಂಕರ ನಾರಾಯಣ – ಹಾಲಾಡಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಳ್ಳಲಿದ್ದು ದಿನ ಗಳಲ್ಲಿ 4 ಟ್ರಿಪ್ ಗಳಲ್ಲಿ ಬಸ್ ಸಂಚರಿಸಲಿದೆ.
ಮಾರಣಕಟ್ಟೆಯಿಂದ ಬೆಳಗ್ಗೆ 8ಕ್ಕೆ ಬಸ್ ಹೊರಟು, ವಂಡ್ಸೆ, ನೆಂಪು, ನೇರಳಕಟ್ಟೆ, ಅಂಪಾರು, ಕ್ರೋಢಬೈಲೂರು, ಶಂಕರನಾರಾಯಣ ಆಗಿ ಹಾಲಾಡಿಯವರೆಗೆ ಸಂಚರಿಸಲಿದೆ. ಮಧ್ಯದ ಅವಧಿಯಲ್ಲಿ ಒಂದೆರಡು ಟ್ರಿಪ್ ಹಾಗೆಯೇ ಸಂಜೆ ಹಾಲಾಡಿಯಿಂದ ಶಂಕರನಾರಾಯಣ ಮೂಲಕ ಮಾರಣಕಟ್ಟೆಯವರೆಗೆ ಸಂಚರಿಸಲಿದೆ. ಇದರಿಂದ ಕ್ರೋಢ ಬೈಲೂರಿನ ಮಕ್ಕಳು, ಸಾರ್ವಜನಿಕರಿಗೂ ಅನುಕೂಲವಾದಂತಾಗಿದೆ. ಇಲ್ಲಿಗೆ ಯಾವುದೇ ಬಸ್ ಸಂಚಾರವಿರಲಿಲ್ಲ. ಇದರಿಂದ ಶಂಕರ ನಾರಾಯಣ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ 170 ಮಂದಿ ಮಕ್ಕಳು, ಮದರ್ ಥೆರೆಸಾ ಶಿಕ್ಷಣ ಸಂಸ್ಥೆಗೆ ತೆರಳುವ 90 ಮಂದಿ ಮಕ್ಕಳು, ಇನ್ನುಳಿದ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಮಕ್ಕಳಿಗೂ ಅನುಕೂಲವಾಗಲಿದೆ. ಕೆಲವರು ನಿಗದಿತ ಸಮಯಕ್ಕೆ ಬಸ್ ಇಲ್ಲದೆ ಕುಂದಾಪುರಕ್ಕೆ ಹೋಗಿ ಶಂಕರನಾರಾಯಣಕ್ಕೆ, ಮತ್ತೆ ಕೆಲವರು ಸಿದ್ದಾಪುರಕ್ಕೆ ತೆರಳಿ ಶಂಕರನಾರಾಯಣಕ್ಕೆ ಸುತ್ತು ಬಳಸಿ ಬರುತ್ತಿದ್ದರು.
ಸುದಿನ ವರದಿRelated Articles
ಕುಂದಾಪುರದ ಗ್ರಾಮೀಣ ಭಾಗದ ವಿವಿಧೆಡೆಗಳಿಗೆ ಬಸ್ ಸಂಪರ್ಕ ಇಲ್ಲದಿರುವುದ ರಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆ ಬಗ್ಗೆ, ವಂಡ್ಸೆ – ನೆಂಪು – ನೇರಳಕಟ್ಟೆ – ಅಂಪಾರು – ಶಂಕರನಾರಾಯಣ ಮಾರ್ಗದಲ್ಲಿ ಬಸ್ ಆರಂಭಿಸುವಂತೆ “ಉದಯವಾಣಿ ಸುದಿನ’ವು ನಿರಂತರ ವರದಿ ಪ್ರಕಟಿಸಿತ್ತು.
Advertisement
ಶೀಘ್ರ ಆರಂಭನೂರಾರು ಮಂದಿ ಮಕ್ಕಳು ನನ್ನಲ್ಲಿಗೆ ಬಂದು ಮನವಿ ಸಲ್ಲಿಸಿ, ಅವರ ಸಮಸ್ಯೆ ಹೇಳಿಕೊಂಡಿದ್ದು, ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಅಗುತ್ತಿದ್ದುದನ್ನು ಮನಗಂಡು, ತತ್ ಕ್ಷಣ ಅಧಿಕಾರಿಗಳ ಸಭೆ ಕರೆದು, ಕೂಡಲೇ ಬಸ್ ಆರಂಭಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೆ. ಜ. 14ರಂದು ಬಸ್ ಸಂಚಾರ ಆರಂಭವಾಗಲಿದೆ. ಶಂಕರನಾರಾಯಣ ಕಾಲೇಜಿಗೆ ಹೋಗುವ ಮಕ್ಕಳಿಗೆ ಇದು ಅನುಕೂಲ ಆಗಲಿದೆ.
-ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು