Advertisement

ಧರ್ಮಾಪುರದಲ್ಲಿ ಮಾರಮ್ಮದೇವರ ಉತ್ಸವ : ತಂಬಿಟ್ಟು ಆರತಿ ಹೊತ್ತು ಸಾಗಿಬಂದ ಹೆಂಗಳೆಯರು

08:23 PM Mar 29, 2022 | Team Udayavani |

ಹುಣಸೂರು : ತಾಲೂಕಿನ ಬಿಳಿಕೆರೆ ಹೋಬಳಿಯ ಧರ್ಮಾಪುರದಲ್ಲಿ ಗ್ರಾಮ ದೇವತೆ ಮಾರಮ್ಮ ದೇವಿಯ ಉತ್ಸವವು ವಿಜೃಂಭಣೆಯಿಂದ ಜರುಗಿತು.

Advertisement

ಧರ್ಮಾಪುರ ಗ್ರಾಮದ ಸಾವಿರಕ್ಕೂ ಹೆಚ್ಚು ಹೆಂಗಳೆಯರು ಕಳಸಹೊತ್ತು ಮೆರವಣಿಗೆಯಲ್ಲಿ ಹೊರಟು ಗ್ರಾಮದ ಬಳಿಯಲ್ಲಿ ಹರಿಯುವ ಕಾಲುವೆ ನೀರಿನಲ್ಲಿ ಗಂಗೆ ಪೂಜೆ ನೆರವೇರಿಸಿದರು. ನಂತರ ದೇವರ ಉತ್ಸವಕ್ಕೆ ಚಾಲನೆ ದೊರೆಯಿತು. ಧರ್ಮಾಪುರದ ಬೀದಿಗಳಲ್ಲಿ ಜಗಮಗಿಸುವ ವಿದ್ಯುತ್ ಅಲಂಕೃತ ತೆರೆದ ವಾಹನದಲ್ಲಿ ದೇವರ ಮಾರಮ್ಮದೇವರ ಮೂರ್ತಿಯನ್ನು ಪ್ರತಿಷ್ಟಾಪಿಸಿ ಭವ್ಯ ಉತ್ಸವ ನಡೆಸಿದರು.

ಮೆರವಣಿಗೆಯಲ್ಲಿ ಮಂಗಳವಾದ್ಯ, ತಮಟೆ ಸದ್ದಿಗೆ ಹುಚ್ಚೆದ್ದು ಕುಣಿದ ಯುವ ಪಡೆ ಗಮನ ಸೆಳೆದರು. ಬೆಳಗಿನ ಜಾವದವರೆಗೂ ಉತ್ಸವದಲ್ಲಿ ಭಕ್ತರು ಉತ್ಸುಕತೆಯಿಂದ ಭಾಗವಹಿಸಿದ್ದರು. ಪ್ರಮುಖ ವೃತ್ತಗಳಲ್ಲಿ ಭಾರೀ ಪಟಾಕಿ ಸಿಡಿಸಿದರು.

ತಂಬಿಟ್ಟು ಆರತಿ: ಬೆಳಗ್ಗೆ 1000 ಕ್ಕೂ ಹೆಚ್ಚು ಮಂದಿ ತಂಬಿಟ್ಟು ಆರತಿ ಹೊತ್ತ ಪುಟ್ಟ ಹೆಣ್ಣು ಮಕ್ಕಳು, ಹೆಂಗಳೆಯರು. ಕೆಲ ಪುರುಷರು ಸಹ ವಿವಿಧ ಮಾದರಿಯ ತಂಬಿಟ್ಟು ತಟ್ಟೆಯನ್ನು ತಲೆ ಮೇಲೆ ಹೊತ್ತು ಧರ್ಮಾಪುರದ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ದೇವಸ್ಥಾಸದ ಬಳಿಗೆ ಸಾಗಿ ಬಂದರು. ಈ ಹಬ್ಬಕ್ಕೆ ನೆಂಟರಿಷ್ಟರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗ್ರಾ.ಪಂ.ಉಫಾಧ್ಯಕ್ಷೆ ತೋಳಸಮ್ಮ ಸದಸ್ಯರಾದ ಪುನೀತ್ ಲೋಕೇಶ್, ರತ್ಮಮ್ನಮಹೇಶ್, ಮಹದೇಸ್ವಾಮಿ, ಮಲ್ಲಿಕಾ, ನಾಡಯಾಜಮಾನರಾದ ವೀರಭದ್ರಶೆಟ್ಟಿ, ಯಜಮಾನರಾದ ಸೋಮಣ್ಣಶೆಟ್ಟಿ, ನೀಲಕಂಠಚಾರಿ, ನಾರಾಯಣನಾಯಕ, ಮಾಸ್ತಿಗೌಡ ಮುಂತಾದ ಹಲವಾರು ಮಂದಿ ಗ್ರಾಮ ದೇವತೆ ಹಬ್ಬದ ಯಶಸ್ವಿಗೆ ಶ್ರಮಿಸಿದರು. ಗ್ರಾಮದ ಯುವಕ ಸಂಘದ ವತಿಯಿಂದ ಅನ್ನದಾನ ಆಯೋಜನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next