ಒಂದರ ಹಿಂದೊಂದರಂತೆ ಕೊಲೆಗಳು ನಡೆಯು ತ್ತಿರುತ್ತವೆ. ಕೊಲೆಯಾದವರೆಲ್ಲ ಸಮಾಜದ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಂಡವರು… ಹಾಗಾದರೆ ಈ ಕೊಲೆಯಾಕಾಗುತ್ತಿರುತ್ತದೆ, ಕೊಲೆಯ ಹಿಂದೆ ಇರುವವರು ಯಾರು.. ಇಂತಹ ಒಂದಷ್ಟು ಪ್ರಶ್ನೆಗಳೊಂದಿಗೆ ತೆರೆದುಕೊಳ್ಳುವ ಸಿನಿಮಾ “ಮಾರಕಾಸ್ತ್ರ’.
ಹೆಸರಿಗೆ ತಕ್ಕಂತೆ “ಮಾರಕಾಸ್ತ್ರ’ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ. ಆರಂಭದಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಮೂಲಕ ತೆರೆದುಕೊಳ್ಳುವ ಸಿನಿಮಾ ಮುಂದೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಆ್ಯಕ್ಷನ್ ಹಿನ್ನೆಲೆಯಲ್ಲಿ ಸಾಗುವ ಸಿನಿಮಾದಲ್ಲಿ ಮಂತ್ರವಾದ, ಲವ್‌ಸ್ಟೋರಿಯೂ ಬಂದು ಹೋಗುತ್ತದೆ. ನಿರ್ದೇಶಕ ಗುರುಮೂರ್ತಿ ಸುನಾಮಿ ಒಂದು ಸಿನಿಮಾ ದಲ್ಲಿ ಎಲ್ಲಾ ಅಂಶಗಳನ್ನು ಸೇರಿಸಿ ಪ್ರೇಕ್ಷಕರನ್ನು ರಂಜಿಸಬೇಕೆಂಬ ನಿರ್ಧಾರಕ್ಕೆ ಬಂದಂತಿದೆ. ಅದೇ ಕಾರಣದಿಂದ “ಮಾರಕಾಸ್ತ್ರ’ ಒಂದು ಪ್ಯಾಕೇಜ್ ಸಿನಿಮಾ.
ಮುಖ್ಯವಾಗಿ ಇದೊಂದು ರಿವೆಂಜ್ ಸ್ಟೋರಿ. ಆ ರಿವೆಂಜ್ ಏನು ಎಂಬುದನ್ನು ತೆರೆಮೇಲೆಯೇ ನೋಡಬೇಕು. ಚಿತ್ರದ ಮೊದಲರ್ಧ ಪಾತ್ರ ಪರಿಚಯದ ಜೊತೆಗೆ ಭರ್ಜರಿ ಆ್ಯಕ್ಷನ್ ಮೂಲಕ ಸಾಗುತ್ತದೆ. ಆದರೆ, ಚಿತ್ರದ ನಿಜವಾದ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ಕೊಲೆಯ ಹಿಂದಿನ ಕಾರ ಣಗಳು, ಸೆಂಟಿಮೆಂಟ್ ಅಂಶ, ಪೊಲೀಸ್ ಪವರ್ ಎಲ್ಲವೂ ಬಂದು ಹೋಗುತ್ತದೆ. ಒಂದು ಆ್ಯಕ್ಷನ್ ಸಿನಿಮಾವನ್ನು ಇಷ್ಟಪಡುವವರಿಗೆ “ಮಾರಕಾಸ್ತ್ರ’ ಇಷ್ಟವಾಗಬಹುದು.
ಚಿತ್ರದಲ್ಲಿ ಮಾಲಾಶ್ರೀ ಭರ್ಜರಿ ಆ್ಯಕ್ಷನ್‌ನಲ್ಲಿ ಅಬ್ಬರಿಸಿದ್ದಾರೆ. ಉಳಿದಂತೆ ಆನಂದ್ ಆರ್ಯ, ಭರತ್ ಸಿಂಗ್, ಉಗ್ರಂ ಮಂಜು, ಹರ್ಷಿಕಾ ಪೂಣತ್ಛ ನಟಿಸಿದ್ದು, ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.