Advertisement

ಆನ್‌ಲೈನ್‌ನಲ್ಲಿ ನಕ್ಷೆ ಮಂಜೂರು ಯೋಜನೆ ಪ್ರಾಯೋಗಿಕ ಜಾರಿ

09:27 AM Jan 03, 2018 | Team Udayavani |

ಬೆಂಗಳೂರು: ರಾಜ್ಯದ ಜನತೆಗೆ ಸುಲಭವಾಗಿ ಕಟ್ಟಡ ನಕ್ಷೆ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರ “ನಿರ್ಮಾಣ’ ಹೆಸರಿನ ಸ್ವಯಂಚಾಲಿತ ಕಟ್ಟಡ ನಕ್ಷೆ ಮಂಜೂರಾತಿ ತಂತ್ರಾಂಶದ ಮೂಲಕ ಆನ್‌ಲೈನ್‌ಲ್ಲಿಯೇ ನಕ್ಷೆ ಮಂಜೂರು ಮಾಡುವ ಯೋಜನೆಯನ್ನು ರಾಜ್ಯದ 10 ನಗರ/ಪಟ್ಟಣಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಿದೆ.

Advertisement

ಈ ನಿಟ್ಟಿನಲ್ಲಿ ರಾಜ್ಯದ 10 ನಗರಗಳಲ್ಲಿ ಒಟ್ಟು 60 ಕೋಟಿ ಮೊತ್ತದಲ್ಲಿ ಸೂಕ್ಷ್ಮ ಯೋಜನೆಯನ್ನು ತಯಾರಿಸಲು ಮಹಾ ಯೋಜನೆಯನ್ನು ಅಥವಾ ಪರಿಷ್ಕೃತ ಮಹಾ ಯೋಜನೆ ಸಿದ್ಧಪಡಿಸಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಕಟ್ಟಡ ನಕ್ಷೆಗಳಿಗಾಗಿ ಜನ ಕಚೇರಿ ಅಲೆದಾಡುವುದನ್ನು ತಪ್ಪಿಸಲು ಆನ್‌ಲೈನ್‌ ಮೂಲಕವೇ ಅವುಗಳನ್ನು ನೀಡಲು ನಗರಾಭಿವೃದ್ಧಿಯಲ್ಲಿ ಗಣಕೀಕರಣ ಕಾರ್ಯ ಕೈಗೊಳ್ಳಲು ಕೂಡ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಯಾವ ನಗರ ಅಥವಾ ಪಟ್ಟಣಗಳಲ್ಲಿ ಇದನ್ನು ಜಾರಿಗೊಳಿಸಬೇಕು ಎಂಬುದನ್ನುನಂತರದಲ್ಲಿ ನಿರ್ಧರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next