Advertisement

3 ವರ್ಷಗಳಲ್ಲಿ ನಕ್ಸಲರ ನಿರ್ಮೂಲನೆ

06:00 AM Oct 08, 2018 | |

ಲಕ್ನೋ: ಮುಂದಿನ ಮೂರು ವರ್ಷಗಳಲ್ಲಿ ಎಡಪಂಥೀಯ ತೀವ್ರಗಾಮಿಗಳನ್ನು ದೇಶದಿಂದ ನಿರ್ಮೂಲನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಲಕ್ನೋದಲ್ಲಿ ಭಾನು ವಾರ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ವರ್ಷಗಳ ಹಿಂದೆ ದೇಶದಲ್ಲಿ ನಕ್ಸಲ್‌ಪೀಡಿತ ಪ್ರದೇಶಗಳ ಸಂಖ್ಯೆ 126 ಇತ್ತು. ಈಗ ಅದು ಸುಮಾರು 10-12ಕ್ಕೆ ಬಂದಿಳಿದಿದೆ. ಇನ್ನು ಒಂದು, ಎರಡು ಅಥವಾ ಮೂರು ವರ್ಷಗಳೊಳಗೆ ನಕ್ಸಲರನ್ನು ಹೇಳಹೆಸರಿ ಲ್ಲದಂತೆ ನಿರ್ಮೂಲನೆ ಮಾಡಿಬಿಡುತ್ತೇವೆ. ನಮ್ಮ ಕ್ರಿಯೆಯು ಕ್ಷಿಪ್ರವಾಗಿರುತ್ತದೆಯೇ ಹೊರತು ನಿರ್ಲಕ್ಷ್ಯದಿಂದ ಕೂಡಿರುವು ದಿಲ್ಲ. ಸಿಆರ್‌ಪಿಎಫ್ ಪಡೆಗಳ ಬದ್ಧತೆ, ಧೈರ್ಯ ಹಾಗೂ ಕಠಿಣ ಪರಿಶ್ರಮದಿಂದ ಈ ಗುರಿ ಸಾಧಿಸಲು ಸಾಧ್ಯ ಎಂದಿದ್ದಾರೆ.

Advertisement

ಪ್ರಸಕ್ತ ವರ್ಷ ಸಿಆರ್‌ಪಿಎಫ್ ಯೋಧರು ಬರೋಬ್ಬರಿ 131 ಮಾವೋವಾದಿಗಳು ಹಾಗೂ ಉಗ್ರರನ್ನು ಸದೆಬಡಿದಿದ್ದಾರೆ. 1,278 ಮಂದಿಯನ್ನು ಸೆರೆಹಿಡಿದಿದ್ದಾರೆ ಮತ್ತು 58 ಮಂದಿ ನಕ್ಸಲರು ಶರಣಾಗಿದ್ದಾರೆ ಎಂದೂ ರಾಜನಾಥ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next