Advertisement

ಐವರು ನಕ್ಸಲರ ಹತ್ಯೆ

06:00 AM Nov 06, 2018 | Team Udayavani |

ಮಾಲ್ಕನ್‌ಗಿರಿ: ಒಡಿಶಾದ ಮಾಲ್ಕನ್‌ಗಿರಿ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಮಹಿಳೆ ಸೇರಿದಂತೆ ಐವರು ನಕ್ಸಲರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.

Advertisement

ಇಲ್ಲಿನ ಪಪೂÉರ್‌ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ಪಡೆಯು ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಮಾವೋವಾದಿಗಳು ಕಣ್ಣಿಗೆ ಬಿದ್ದರು. ಯೋಧರನ್ನು ನೋಡುತ್ತಿದ್ದಂತೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸತೊಡಗಿದರು. ಈ ವೇಳೆ ಎರಡೂ ಕಡೆ ಗುಂಡಿನ ಚಕಮಕಿ ನಡೆಯಿತು. ಪ್ರತಿದಾಳಿ ವೇಳೆ ಐವರು ನಕ್ಸಲರು ಮೃತಪಟ್ಟರು. ಇನ್ನೂ ಹೆಚ್ಚು ಸಾವು ನೋವು ಸಂಭವಿಸಿರುವ ಸಾಧ್ಯತೆಯೂ ಇದ್ದು, ಶೋಧ ಕಾರ್ಯ ಮುಂದುವರಿಸಿದ್ದೇವೆ ಎಂದು ಡಿಜಿಪಿ ಆರ್‌.ಪಿ. ಶರ್ಮಾ ತಿಳಿಸಿದ್ದಾರೆ.

ಎನ್‌ಕೌಂಟರ್‌ ನಡೆದ ಸ್ಥಳದಲ್ಲಿ ಎರಡು ಇನ್ಸಾಸ್‌ ರೈಫ‌ಲ್‌ಗ‌ಳು, ಒಂದು ಎಸ್‌ಎಲ್‌ಆರ್‌, ಒಂದು 303 ರೈಫ‌ಲ್‌ ಮತ್ತು ಹ್ಯಾಂಡ್‌ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ನಡೆದ ವೇಳೆ ಮಾವೋವಾದಿ ನಾಯಕ ರಣದೇವ್‌ ಕೂಡ ಸ್ಥಳದಲ್ಲಿದ್ದ ಎಂಬ ಶಂಕೆಯಿದ್ದು, ಆತ ತಪ್ಪಿಸಿಕೊಂಡಿದ್ದಾನೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next