Advertisement

 “…ಮಂಜುಳಗಾನ’ಕ್ಕೆ ಶತಕ ಸಂಭ್ರಮ

11:10 AM Jun 24, 2017 | Team Udayavani |

ಬೆಂಗಳೂರು: ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಕಾರ್ಯಕ್ರಮ “ಮಧುರ ಮಧುರವೀ ಮಂಜುಳಗಾನ’ ಯಶಸ್ವಿ ನೂರು ಕಂತುಗಳನ್ನು ಪೂರೈಸಿದೆ. ಕಲೆ, ಸಾಹಿತ್ಯ, ಸಂಗೀತ ಮತ್ತು ನೃತ್ಯ ಪ್ರಕಾರಗಳನ್ನು ಪ್ರೋತ್ಸಾಹಿಸುವ ಹಾಗೂ ಯುವ ಕಲಾವಿದರನ್ನು ಗುರುತಿಸುವ ಈ ಕಾರ್ಯಕ್ರಮ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಮನೆಮಾತಾಗಿದೆ.

Advertisement

ನೂರು ಕಂತುಗಳ ಸಂಭ್ರಮಾಚರಣೆಗಾಗಿ ಇದೇ ಜೂ.25 ರಂದು ಮಧ್ಯಾಹ್ನ 2 ಗಂಟೆಗೆ “ಶತ ಸಂಭ್ರಮ’ ಎಂಬ ವಿಶೇಷ ಕಾರ್ಯಕ್ರಮವನ್ನು ನಗರದ ಕುಮಾರಸ್ವಾಮಿ ಲೇಔಟ್‌ನ ದಯಾನಂದ ಸಾಗರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಾಹಿನಿಯ ಉಪ ಮಹಾನಿರ್ದೇಶಕ ಎನ್‌.ಚಂದ್ರಶೇಖರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next