ಎಂದು ಜೋರುಧ್ವನಿಯಲ್ಲಿ ಹೇಳಿದರು ಜಗ್ಗೇಶ್. ಕಣ್ಣು ಇಷ್ಟಗಲ ಆಗಿತ್ತು. ಮುಖದಲ್ಲಿ ಆಶ್ಚರ್ಯ ಕುಣಿದಾಡುತಿತ್ತು. ಸ್ವಲ್ಪ ಸಿಟ್ಟೂ ಸೇರಿಕೊಂಡಿತ್ತು. ಇಷ್ಟೆಲ್ಲಾ ಆಗೋಕೆ, ಮಾಲೂರು ಶ್ರೀನಿವಾಸ್ ಏನು ಹೇಳಿದರು ಎಂಬ ಪ್ರಶ್ನೆ ಬರೋದು ಸಹಜ. ಮಾಲೂರು ಶ್ರೀನಿವಾಸ್ ಫೋನ್ ಮಾಡಿ, “ನಿಮಗೆ ಅಡ್ವಾನ್ಸ್ ಬಂತಾ’ ಎಂದರಂತೆ. ಜಗ್ಗೇಶ್ ಶಾಕ್ ಆಗಿದ್ದು ಆಗಲೇ …
Advertisement
“ಒಂದಿಷ್ಟು ತಂತ್ರಜ್ಞರು ಒಬ್ಬರನ್ನು ಕರೆದುಕೊಂಡು ಬಂದು ಸಿನಿಮಾ ಮಾಡೋಣ ಎಂದರು. ಒಂದೊಳ್ಳೆಯ ಕಥೆ ಇದ್ದರೆ ಖಂಡಿತಾ ಮಾಡೋಣ ಅಂದೆ. ಅವರು ನೋಡಿದರೆ, ಅಡ್ವಾನ್ಸ್ ಕೊಡಬೇಕು ಎಂದು ಹೇಳಿ ಈ ಮನುಷ್ಯನ ಸೈಟು ಮಾರಿಸಿದ್ದಾರೆ. ಆದರೆ, ಯಾರಿಗೂ ಅಡ್ವಾನ್ಸ್ ಕೊಟ್ಟಿಲ್ಲ. ಲೆಕ್ಕ ಕೇಳಿದರೆ ಮಾಯ. ಅವರು ನಮ್ಮನೆಗೆ ಬಂದಾಗ ಅವರೇ ನಿರ್ಮಾಪಕರು ಅನ್ನೋ ಲೆವೆಲ್‌ಗೆ ಮಾತಾಡಿದರು. ನನ್ನನ್ನ ದೂರಾನೇ ಇಟ್ಟಿದ್ದರು. ನನಗೂ ನಿರ್ಮಾಪಕ ಕೃಷ್ಣ ಅವರಿಗೆ ಮೋಸ ಹೋಗಿದ್ದು ಗೊತ್ತಿರಲಿಲ್ಲ. ಕೊನೆಗೆ ನಮ್ ಮಾಲೂರು ಶ್ರೀನಿವಾಸ್ ಫೋನ್ ಮಾಡಿ ಹೇಳಿದಾಗಲೇ ಗೊತ್ತಾಗಿದ್ದು, ಏನೇನೋ ಅವಾಂತರ ಆಗಿದೆ ಅಂತ. ಕೃಷ್ಣ ಅವರನ್ನ ನೋಡಿ ಬೇಸರ ಆಯ್ತು. ಅವರು ನನ್ನ ಅಭಿಮಾನಿಯಂತೆ. ನನ್ನ ಸಿನಿಮಾ ಮಾಡೋಕೆ ಬಂದು ಹೀಗಾಗಿದ್ದರಿಂದ, ನಾನೇ ಸಿನಿಮಾ ಮಾಡಿಕೊಟ್ಟೆ’ ಎನ್ನುತ್ತಾರೆ ಜಗ್ಗೇಶ್.
Related Articles
Advertisement
ಜಗ್ಗೇಶ್‌ರಂತಹ ಸೀನಿಯರ್ ನಟರೇ, ನನಗ್ಯಾಕೆ ಅಂತ ಇದ್ದು ಬಿಟ್ಟರೆ, ಎಷ್ಟೋ ಜನ ಮೋಸ ಹೋಗುತ್ತಾರಲ್ಲಾ? ಇದು ಜಗ್ಗೇಶ್ ಅವರಿಗೂ ಗೊತ್ತಿದೆ. ಆದರೂ ಸುಮ್ಮನಿದ್ದಾರಂತೆ. ಕಾರಣ ಅವಮಾನ. “ಸಿನಿಮಾ ಮತ್ತು ರಾಜಕೀಯದಲ್ಲಿ ಸಾಕಷ್ಟು ಅವಮಾನವನ್ನ ನೋಡಿಬಿಟ್ಟಿದ್ದೀನಿ ನಾನು. ಸುಮ್ಮನೆ ವಿವಾದ ಮೇಲೆ ಎಳೆದುಕೊಳ್ಳೋಕ್ಕಿಂತ ಆರಾಮಾಗಿರೋಣ ಅಂತ ಅನಿಸುತ್ತೆ. ಪರಿಸ್ಥಿತಿ ಮುಂಚಿನಂತಿಲ್ಲ. ಸಾಕಷ್ಟು ಬದಲಾಗಿದೆ. ನಾನು ನೋಡಿದ ಚಿತ್ರರಂಗ ಬೇರೆ, ಈಗಿನ ಚಿತ್ರರಂಗ ಬೇರೆ. ನಮಗೆ ಹೊಂದಾಣಿಕೆ ಆಗಲ್ಲ. ಅದೇ ಕಾರಣಕ್ಕೆ ಯಾರ ಸಹವಾಸ ಬೇಡ ಅಂತ ಸುಮ್ಮನಿದ್ದುಬಿಟ್ಟಿದ್ದೀನಿ. ನಮ್ಮದೇ ಏನೋ ಕೆಲಸ ಇರತ್ತೆ ಮಾಡಿಕೊಂಡಿರಿ¤àನಿ. ಮೈಸೂರಿನಲ್ಲಿ ಮೊನ್ನೆ ಚೌಲಿó ಕಟ್ಟಿದೆ. ಮುಂದೆ ತುಮಕೂರಿನಲ್ಲಿ ಪ್ಲಾನ್ ಮಾಡ್ತಿದ್ದೀನಿ. ಇನ್ನೂ ನಾಲ್ಕಾರು ಊರುಗಳಲ್ಲಿ ಮಾಡೋ ಯೋಜನೆ ಇದೆ’ ಎನ್ನುತ್ತಾರೆ ಜಗ್ಗೇಶ್.
ಹಾಗಾದರೆ, ಅವರು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳೋದು ಕಡಿಮೆ ಮಾಡುತ್ತಾರಾ? ಖಂಡಿತಾ ಇಲ್ಲ ಎನ್ನುವ ಉತ್ತರ ಅವರಿಂದ ಬರುತ್ತದೆ. “ಸಿನಿಮಾ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಇವತ್ತೂ ನಾನೇನಿದ್ದೀನಿ ಅದು ಸಿನಿಮಾದಿಂದಲೇ. ಅದೇ ಕಾರಣಕ್ಕೆ ಈಗಲೂ ವಕೌìಟ್ ಮಾಡಿಕೊಂಡು, ಒಳ್ಳೆಯ ಕಥೆಗೆ ಕಾಯುತ್ತಿದ್ದೀನಿ. ಮುಖ್ಯವಾಗಿ ಇವತ್ತು ಒಳ್ಳೆಯ ಬಿಝಿನೆಸ್ ಆಗುತ್ತಿದೆ. “ಕಿರಿಕ್ ಪಾರ್ಟಿ’ 22 ಕೋಟಿ ಬಿಝಿನೆಸ್ ಮಾಡಿದೆ ಅಂದರೆ, ಸಾಮರ್ಥ್ಯ ಅರ್ಥ ಮಾಡಿಕೊಳ್ಳಬೇಕು. ಆದರೆ, ನಮ್ಮಲ್ಲಿ ನೂರು ಸಮಸ್ಯೆಗಳು. ನಮ್ಮಲ್ಲಿ ಪ್ರಮುಖವಾಗಿ ಒಗ್ಗಟ್ಟಿಲ್ಲ. ಏಳೆಂಟು ನಿರ್ಮಾಪಕರು, ನಮಗೆ ಐದು ಹೀರೋಗಳು ಸಾಕು ಅಂತ ಫಿಕ್ಸ್ ಆಗಿಬಿಟ್ಟಿದ್ದಾರೆ. ಮಿಕ್ಕವರಿಗೆ ಎ,ಬಿ,ಸಿ ಗೊತ್ತಿಲ್ಲ. ಹೀಗಾದರೆ ಏನು ಮಾಡೋದು’ ಎನ್ನುವುದು ಅವರ ಪ್ರಶ್ನೆ.
ಸರಿ ಸಿನಿಮಾ ಮಧ್ಯೆ ರಾಜಕೀಯ ಬಿಟ್ಟೇ ಹೋಯಿತಾ ಎನ್ನುವ ಪ್ರಶ್ನೆ ಬಂತು. ಅವರನ್ನು ಕಾರ್ಯಕಾರಿಣಿಗೆ ತೆಗೆದುಕೊಳ್ಳಲಾಗಿದೆಯಂತೆ. “ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ. ಇನ್ನು ಈ ಬಾರಿ ಚುನಾವಣೆಗೆ ಸ್ಪರ್ಧಿಸು ಅಂತಲೂ ಹೇಳ್ತಿದ್ದಾರೆ. ಬೆಂಗಳೂರಲ್ಲಿ ನಿಂತರೆ ಹೇಗೆ ಅಂತ ಯೋಚಿಸುತ್ತಿದ್ದೀನಿ. ಹಳ್ಳಿàಲಿ ನಿಂತರೆ ತುಂಬಾ ಕಷ್ಟ. ಅಲ್ಲಿ ಫುಲ್ ಡ್ನೂಟಿ ಮಾಡಬೇಕಾಗುತ್ತೆ. ಸಾವು, ಮದುವೆ ಯಾವುದನ್ನೂ ಮಿಸ್ ಮಾಡುವ ಹಾಗಿಲ್ಲ. ಆ ಕಡೆ ಹೆಚ್ಚು ತೊಡಗಿಸಿಕೊಂಡರೆ, ಸಿನಿಮಾ ಬಿಡಬೇಕಾಗುತ್ತೆ. ಆಗ 10 ವರ್ಷ ಇದೇ ಕಾರಣಕ್ಕೆ ಲಾಸ್ ಆಯ್ತು. ಹಾಗಾಗಿ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಂದೆ ನೋಡೋಣ’ ಎನ್ನುತ್ತಾರೆ ಜಗ್ಗೇಶ್.
– ಚೇತನ್ ನಾಡಿಗೇರ್