ತೆಂಗಿನ ಎಣ್ಣೆ ಪ್ರತಿನಿತ್ಯ ಮನೆಯಲ್ಲಿ ಬಳಕೆಯಾಗುವ ವಸ್ತು. ಸೌಂದರ್ಯ, ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಯ ಉಪಯೋಗ ಹಲವು. ಸೌಂದರ್ಯ ಪ್ರಿಯರು ತೆಂಗಿನ ಎಣ್ಣೆಯನ್ನು ದಿನನಿತ್ಯ ಬಳಕೆ ಮಾಡಬಹುದು. ಮನೆಯಲ್ಲೇ ಇದು ಸುಲಭವಾಗಿ ಸಿಗುವುದರಿಂದ ಇದರ ಬಳಕೆ ಕಷ್ಟವೇನಲ್ಲ.
Advertisement
ಬಳಕೆ ಹೇಗೆ
ತೆಂಗಿನ ಎಣ್ಣೆಯನ್ನು ಫೇಸ್‌ವಾಶ್ ಮಾದರಿಯಲ್ಲಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆ ಹೆಚ್ಚು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಆದ್ದರಿಂದ ಮನೆಯಿಂದ ಹೊರಗಡೆ ಹೋಗಿ ಬಂದ ಮೇಲೆ ತೆಂಗಿನ ಎಣ್ಣೆಯನ್ನು ಬಳಸಿ ಮುಖ ತೊಳೆದುಕೊಳ್ಳಬಹುದು.
2 ಫೇಸ್‌ಮಾಸ್ಕ್ನಲ್ಲಿ ಇದೆ ಉತ್ತಮ ಪ್ರತಿಕ್ರಿಯೆ
ತೆಂಗಿನ ಎಣ್ಣೆಯನ್ನು ಫೇಸ್‌ಮಾಸ್ಕ್ ಮಾದರಿಯಲ್ಲಿ ಬಳಕೆ ಮಾಡಬಹುದು. ತೆಂಗಿನ ಎಣ್ಣೆಯನ್ನು ಅರಶಿಣದೊಂದಿಗೆ ಅಥವಾ ಇತರೆ ಉಪಯುಕ್ತ ವಸ್ತುಗಳನ್ನು ಸೇರಿಸಿ ಮುಖಕ್ಕೆ ಮಾಸ್ಕ್ ಮಾದರಿಯಲ್ಲಿ ಬಳಕೆ ಮಾಡಬಹುದು. 3 ತೆಂಗಿನ ಎಣ್ಣೆಯ ಮಸಾಜ್
ತೆಂಗಿನ ಎಣ್ಣೆಯ ಮಸಾಜ್ ನಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖಕ್ಕೆ ಕಾಂತಿ ಯುಕ್ತ ತ್ವಚೆ ಯನ್ನು ನೀಡು ತ್ತದೆ ಮತ್ತು ಇದು ಮನಸ್ಸಿನ ಒತ್ತಡ ನಿಯಂತ್ರಣ ಮಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
Related Articles
Advertisement
ಉಪಯೋಗಗಳು1 ತೆಂಗಿನ ಎಣ್ಣೆಯಿಂದ ಚರ್ಮಕ್ಕೆ ಮಸಾಜ್ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
2 ಒಣಗಿದ ಮುಖ ಹೊಂದಿರುವವರು ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಮುಖ ಹೆಚ್ಚು ಹೊಳೆಯುತ್ತದೆ.
3 ಮುಖದ ಚರ್ಮ ಹೆಚ್ಚು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.
4 ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಸಿ ಇರುವ ಕಾರಣ ಇದು ಮುಖಕ್ಕೆ ಮಾಸcರಿಂಗ್ ನೀಡುತ್ತದೆ. - ರಂಜಿನಿ ಮಿತ್ತಡ್ಕ