Advertisement

Election; ನಿಮ್ಮಂತವರು ಹಲವರು ಬಂದು ಹೋಗಿದ್ದಾರೆ..: ರಾಹುಲ್ ವಿರುದ್ದ ಸ್ಮೃತಿ ವಾಗ್ದಾಳಿ

09:29 AM Apr 07, 2024 | Team Udayavani |

ಚೆನ್ನೈ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಿದ್ದು, ನಿಮ್ಮಂತವರು ಹಲವರು ಬಂದು ಹೋಗಿದ್ದಾರೆ, ಆದರೆ ಹಿಂದೂಸ್ತಾನವು ಹಿಂದೆಯೂ ಇತ್ತು, ಮುಂದೆಯೂ ಇರಲಿದೆ ಎಂದರು ಕಿಡಿಕಾರಿದ್ದಾರೆ.

Advertisement

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿರುವ ಸ್ಮೃತಿ ಇರಾನಿ ಅವರು ಚೆನ್ನೈನ ವೆಪ್ಪೇರಿ ಜಿಲ್ಲೆಯ ವೈಎಂಸಿಎ ಸಭಾಂಗಣದಲ್ಲಿ ಸೆಂಟ್ರಲ್ ಚೆನ್ನೈ ಬಿಜೆಪಿ ಅಭ್ಯರ್ಥಿ ವಿನೋಜ್ ಪಿ ಸೆಲ್ವಂ ಅವರನ್ನು ಬೆಂಬಲಿಸಿ ಚುನಾವಣಾ ಪ್ರಚಾರ ನಡೆಸಿದರು.

“ನನ್ನ ಧ್ವನಿ ರಾಹುಲ್ ಗಾಂಧಿ ಅವರಿಗೆ ತಲುಪುತ್ತಿದೆಯಾದರೆ ಒಂದು ವಿಚಾರ ಹೇಳಬೇಕಿದೆ. ನಿಮ್ಮಂತವರು ಹಲವು ಬಂದು ಹೋಗಿದ್ದಾರೆ, ಆದರೆ ಹಿಂದೂಸ್ತಾನವು ಹಿಂದೆಯೂ ಇತ್ತು, ಮುಂದೆಯೂ ಇರಲಿದೆ” ಎಂದು ಶನಿವಾರ ಇರಾನಿ ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣದ ಮಹತ್ವದ ಕುರಿತು ಮಾತನಾಡಿದರು. “ದೇಶದ ಕೆಲ ರಾಜ್ಯಗಳಲ್ಲಿ ವಿಪಕ್ಷ ಒಕ್ಕೂಟದ ಸದಸ್ಯರು ಜೈ ಶ್ರೀರಾಮ್ ಹೇಳಿದವರನ್ನು ಕೊಂದ ಘಟನೆಗಳು ನಡೆದಿದೆ. ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಇದು ನಡೆದಿದೆ. ಆದರೆ ನಮ್ಮ ಪುಣ್ಯದಿಂದ ಇಂದು ನಾವು ಶ್ರೀರಾಮನ ಚರಣಗಳಿಗೆ ತಲೆ ಬಾಗುತ್ತಿದ್ದೇವೆ. ದಿನಾಂಕ ಗೊತ್ತಪಡಿಸಿ, ದೇವಾಲಯವನ್ನು ಕಟ್ಟಲಾಯಿತು. ಭಗವಂತ ರಾಮನ ಪ್ರಭಾವ ನೋಡಿ, ಯಾರು ರಾಮನ ಇರುವಿಕೆಯನ್ನು ಪ್ರಶ್ನೆ ಮಾಡಿದರೋ, ಅವರನ್ನೂ ರಾಮ ಕರೆಸಿಕೊಂಡ” ಎಂದು ಇರಾನಿ ಭಾಷಣದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next