Advertisement

ಬಿಲ್ವಪತ್ರೆಯಲ್ಲಿದೆ ಹಲವು ಔಷಧ ಗುಣ

11:39 PM Feb 24, 2020 | mahesh |

ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ. ಬಿಲ್ವಪತ್ರೆಯ ಎಲೆ, ಕಾಯಿ, ತೊಗಟೆ, ಬೇರು ಎಲ್ಲವೂ ಔಷಧ ಗುಣಗಳನ್ನು ಹೊಂದಿದೆ.

Advertisement

ಆಯುರ್ವೇದದಲ್ಲಿ ಬಿಲ್ವಪತ್ರೆಯ ಪ್ರಯೋಜನಗಳನ್ನು ತಿಳಿಸಿದ್ದಾರೆ. ವಾತದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಬೇರಿನಲ್ಲಿದೆ. ಬಿಲ್ವದ ಕಾಯಿ ಕಫ‌ ನಿವಾರಣೆಗೆ ಸಹಾಯಕ. ಜತೆಗೆ ಜೀರ್ಣಕ್ರೀಯೆಗೆ ಮತ್ತು ಹೊಟ್ಟೆ ನೋವು, ಭೇದಿ ಮೊದಲಾದ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ.

ಬಿಲ್ವಪತ್ರೆಯ ಪ್ರಯೋಜನಗಳು
1 ಚರ್ಮದ ಆರೋಗ್ಯಕ್ಕೆ ಬಿಲ್ವಪತ್ರೆ ಉತ್ತಮ. ದೇಹದಲ್ಲಿ ಕುರು ಎದ್ದರೆ ಬಿಲ್ವಪತ್ರೆ ಮರದ ಬೇರನ್ನು ಜಜ್ಜಿ ನಿಂಬೆ ರಸದೊಂದಿಗೆ ಹಚ್ಚಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.

2 ತಲೆನೋವಿನ ಸಮಸ್ಯೆಯಿದ್ದರೆ ಬಿಲ್ವಪತ್ರೆಯ ಒಣಬೇರನ್ನು ಅರೆದು ಹಣೆಗೆ ಹಚ್ಚಿದರೆ ತಲೆನೋವಿನ ಸಮಸ್ಯೆ ಪರಿಹಾರವಾಗುತ್ತದೆ.

3 ತಲೆಯಲ್ಲಿ ಹೊಟ್ಟು ಇದ್ದರೆ ಬಿಲ್ವಪತ್ರೆಯ ಕಾಯಿಯನ್ನು ಬೇಯಿಸಿ ಅದರ ತಿರುಳನ್ನು ಅರೆದು ತಲೆಗೆ ಹಚ್ಚಿದರೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

Advertisement

4 ನಿದ್ರಾಹೀನತೆಯಿಂದ ಬಳಲುತ್ತಿರುವವರು ಬಿಲ್ವಪತ್ರೆಯ ಎಲೆಯನ್ನು ನೀರು ಸೇವಿಸದೆ ಅರೆದು ಹಣೆಗೆ ಹಚ್ಚಿಕೊಂಡರೆ ಒಳ್ಳೆಯ ನಿದ್ದೆ ಬರುತ್ತದೆ.

5 ಬಿಲ್ವಪತ್ರೆಯ ರಸವನ್ನು ಪ್ರತಿದಿನ 2 ಚಮಚ ಸೇವಿಸಿದರೆ ನಿಶ್ಯಕ್ತಿಯ ಸಮಸ್ಯೆ ಕಡಿಮೆಯಾಗುತ್ತದೆ.

6 ಕಣ್ಣು ಉರಿ, ತುರಿಕೆ ಇದ್ದರೆ ಇದನ್ನು ಚೆನ್ನಾಗಿ ಅರೆದು ಕಣ್ಣಿನ ಮೇಲೆ ಲೇಪಿಸಿಕೊಳ್ಳಬೇಕು.

7 ಬಾಯಿಯಲ್ಲಿ ಹುಣ್ಣಾದರೆ ಬಿಲ್ವಪತ್ರೆ ಹಣ್ಣಿನ ತಿರುಳನ್ನು ಬೆಲ್ಲದ ಜತೆಯಲ್ಲಿ ಸೇವಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.

8 ಬೊಜ್ಜು ಸಮಸ್ಯೆಗೆ ಬಿಲ್ವಪತ್ರೆ ಹೆಚ್ಚು ಪರಿಣಾಮ ಬೀರುತ್ತದೆ.

9 ಶ್ವಾಸಕೋಶದ ಹಲವು ಸಮಸ್ಯೆಗಳಿಗೆ ಬಿಲ್ವಪತ್ರೆ ರಾಮಬಾಣವಾಗಿದೆ.
ಹಲವಾರು ಸಂಶೋಧನೆಗಳ ಪ್ರಕಾರ ಬಿಲ್ವಪತ್ರೆ ರೋಗನಿರೋಧಕ ಶಕ್ತಿಗಳನ್ನು ಹೊಂದಿದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಅತಿಯಾಗಿ ಬೆವರುವುದರಿಂದ ದೇಹ ದುರ್ಗಂಧದ ಸಮಸ್ಯೆ ಕಾಡುತ್ತಿದ್ದರೆ ಬಿಲ್ವಪತ್ರೆಯನ್ನು ಮೈಗೆ ಹಚ್ಚಿಕೊಳ್ಳಬಹುದು. ಇದರಿಂದ ದುರ್ಗಂಧದ ಸಮಸ್ಯೆ ನಿವಾರಣೆಯಾಗುತ್ತದೆ.

- ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next