Advertisement

ಕಾಲನ ಭೂಗರ್ಭ ಸೇರುತ್ತಿದೆ ಅತ್ಯಮೂಲ್ಯ ಶಿಲಾ ಶಾಸನ !

10:55 AM Jun 17, 2019 | keerthan |

ಕುಂದಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಮಹತೋಭಾರ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಐತಿಹಾಸಿಕ ವಿಜಯ ನಗರ ಕಾಲದಲ್ಲಿ ವೈಭವದಿಂದ ಮೆರೆದ ಸುಮಾರು 800 ವರ್ಷಗಳ ಇತಿಹಾಸವಿರುವ ಅತ್ಯಮೂಲ್ಯ ಬೃಹತ್ ಶಿಲಾ ಶಾಸನವೊಂದು ಇಲ್ಲಿಗೆ ಸಮೀಪದ ಗುಡ್ಡೆವಳಲು ಎಂಬಲ್ಲಿ ಕಾನನದ ನಡುವೆ ಭೂಗರ್ಭ ಸೇರುತ್ತಿದ್ದು ಶಾಸನದ ಮೇಲಿನ ಬರಹಗಳು ಸಂಪೂರ್ಣ ಮರೆಯಾಗುತ್ತಿದೆ .

Advertisement

ಈ ಹಿನ್ನೆಲೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಲ್ತೂರು ಸುರೇಂದ್ರ ಹೆಗ್ಡೆ ಹಾಗೂ ಬಸ್ರೂರಿನ ಪ್ರಶಾಂತ್ ಕುಮಾರ್ ಅವರ ತಂಡ ಜೂ.16 ರಂದು ಶಾಸನಗಳಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಪಡೆದು ಸಂರಕ್ಷಣೆಗೆ ಚಿಂತನೆ ಮಾಡಿದ್ದಾರೆ.

ಮಾತನಾಡುವ ಶ್ರೀ ಮಹಾಲಿಂಗ ಎಂದೇ ಪ್ರಸಿದ್ಧಿಯಾದ ಉಳ್ತೂರಿನ ಶ್ರೀ ಮಹಾಲಿಂಗೇಶ್ವರ ವಿಜಯ ನಗರದ ಆಳ್ವಿಕೆಯ ಕಾಲದ ವೈಭವದಿಂದ ಮೆರೆದ ಅತ್ಯಮೂಲ್ಯ ಮಾಹಿತಿ ಗಳು ಗುಡ್ಡೆವಳಲಿನಲ್ಲಿರುವ ಶಾಸನಗಳು ಅಡಕವಾಗಿದ್ದು ಎಂದು ಹೇಳಲಾಗುತ್ತಿದ್ದು ಹಿಂದೆ ಈ ದೇವಳದ ಮೂಲ ಸ್ಥಾನವೇ ಗುಡ್ಡೆವಳಲಿನಲ್ಲಿತ್ತು ಎಂದು ಪೂರ್ವಜರ ಅಭಿಪ್ರಾಯ ಅದಕ್ಕೆ ನಿದರ್ಶನವಾಗಿ ಇಲ್ಲಿ ಕೆಲವು ಕುರುಹುಗಳ ನಡುವೆ ಈ ಶಾಸನಗಳು ದೊರೆತ್ತಿರುವುದು ಮತ್ತಷ್ಟು ಗ್ರಾಮಸ್ಥರ ಕೌತುಕತೆಗೆ ಕಾರಣವಾಗಿದೆ.


ಭೂ ಗರ್ಭ ಸೇರುತ್ತಿದೆ ಶಿಲಾ ಶಾಸನ : ಈ ಬೃಹತ್ ಶಾಸನದ ಮೇಲ್ಭಾಗದಲ್ಲಿ ಲಿಂಗ ಸ್ವರೂಪಿ ಮಹತೋ‘ರ ಶ್ರೀ ಮಹಾಲಿಂಗೇಶ್ವರ ದೇವನ ಪಾಣೆಪೀಠವನ್ನು ಹೊಂದಿದ ಲಿಂಗ ಹಾಗೂ ಇದರ ಎರಡು ಬದಿಯಲ್ಲಿ ಬಸವ ಮತ್ತು ದೀಪದ ಸಂಕೇತ ಎದ್ದು ಕಾಣುತ್ತಿದೆ ಮೇಲ್ಭಾಗದದಲ್ಲಿ ಸೂರ್ಯ ಚಂದ್ರರ ಕೆತ್ತನೆ ಗಮನ ಸೆಳೆಯುತ್ತಿದ್ದು ಸಮೀಪದಲ್ಲಿಯೇ ಹಾವಿನ ಹುತ್ತ ನಿರ್ಮಿತವಾಗಿದೆ. ಆದರೆ ಕಾಲನ ಹೊಡೆತಕ್ಕೆ ಸಿಲುಕಿರುವ ಕಾರಣ ಶಾಸನದಲ್ಲಿರುವ ಲಿಪಿಗಳು ಸಂಪೂರ್ಣ ಮಾಸಿದಂತಿದ್ದು ಸಂಪೂರ್ಣ ಭೂವಿಗೆ ಸ್ಪರ್ಶಿಸಿದ ಸ್ಥಿತಿಯಲ್ಲಿ ಜನ ವಸತಿ ಪ್ರದೇಶಲ್ಲಿ ಅನಾಥವಾಗಿ ನಿಂತಿದೆ . ಶಾಸನಗಳಿರುವ ಸ್ಥಳದಲ್ಲಿ ನಿಧಿ ಇದೆ ಎನ್ನುವ ನಂಬಿಕೆ ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದ್ದು ಇಂತಹ ಅತ್ಯಮೂಲ್ಯ ಶಾಸನದ ಸಂರಕ್ಷಣೆ ಶಿಲಾ ಶಾಸನ ತಜ್ಞರು ಅಧ್ಯಯನಗೈದು ಉತ್ಕನನ ಮಾಡುವ ಮೂಲಕ ದೇವಳದ ಮುಖ್ಯ ಪ್ರಾಕಾರಕ್ಕೆ ವರ್ಗಾಹಿಸುವ ಕುರಿತು ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸುವ ಮಹತ್ವದ ಕಾರ್ಯವಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next