ತುಮಕೂರು: ವಿಶ್ವ ವ್ಯಾಪಿ ಹರಡಿರುವ ಕೊರೊನಾ ಸೋಂಕು ಹಿನ್ನೆಲೆ ಒಟ್ಟಿಗೆ ಸೇರಿ ಯೋಗ ಮಾಡಲು ಸಾಧ್ಯವಾಗದೆ. ಸಾಮಾ ಜಿಕ ಅಂತರ ಕಾಯ್ದು ಕೊಂಡು ಭಾನುವಾರ ಕಲ್ಪತರು ನಾಡಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಮನೆಗಳಲ್ಲಿ ತಮ್ಮ ಕುಟುಂಬದೊಂದಿಗೆ ಆಚರಣೆ ಮಾಡಿದರು. ಬೆಳಗ್ಗೆ 7ರಿಂದ 8 ಗಂಟೆಯವರೆಗೆ ಸಾರ್ವ ಜನಿಕರು ತಮ್ಮ ಮನೆಯಲ್ಲಿಯೇ ಯೋಗಾ ಭ್ಯಾಸ ಮಾಡುವ ಮೂಲಕ ಯೋಗ ದಿನಾ ಚರಣೆ ಆಚರಿಸಲು ಜಿಲ್ಲಾಡಳಿತ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿ ಗಳು, ನಾಗರಿಕರು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಯೋಗ ಮಾಡಿದರು.
ಮನೆಯಲ್ಲೇ ಯೋಗ ದಿನಾಚರಣೆ: ಕಳೆದ 5 ವರ್ಷಗಳಿಂದ ಆಯುಷ್ ಇಲಾಖೆ ವತಿ ಯಿಂದ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ರೋಗದ ಹಿನ್ನೆಲೆಯಲ್ಲಿ ಯೋಗ ದಿನವನ್ನು ಸಾರ್ವಜನಿಕ ಕಾರ್ಯ ಕ್ರಮವನ್ನಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಾನುವಾರ ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ತಮ್ಮ ಮನೆಯಲ್ಲಿಯೇ ಕುಟುಂಬ ಸದಸ್ಯರೊಟ್ಟಿಗೆ ಮನೆಯಲ್ಲಿಯೇ ಯೋಗ, ಯೋಗ ಕುಟುಂಬ ದೊಂದಿಗೆ ಎನ್ನುವ ಘೋಷವಾಕ್ಯದೊಂದಿಗೆ ಯೋಗಾಭ್ಯಾಸ ಮಾಡಿ 6ನೇ ವರ್ಷದ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದರು.
ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾಧಿ ಕಾರಿ ಡಾ.ಕೆ.ರಾಕೇಶ್ ಕುಮಾರ್, ಆಯುಷ್ ಅಧಿಕಾರಿ ಡಾ.ಸಂಜೀವಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಜಿಲ್ಲಾ ಶಸOಉಚಿಕಿತ್ಸಕ ಡಾ.ವೀರಭದ್ರಯ್ಯ, ಯೋಗ ತಜ್ಞೆ ಡಾ.ಭವ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ, ಡಾ.ವಿ.ಎಂ.ಪ್ರಭಾಕರ, ಡಾ. ಗುರುಪ್ರಸಾದ್, ಡಾ.ರಾಮಯ್ಯ, ಡಾ.ಹಿರೇಮಠ ಮನೆಯಲ್ಲಿಯೇ ಯೋಗ ಮಾಡಿದರು.
ಯೋಗದಿಂದ ರೋಗ ನಿವಾರಣೆ: ಯೋಗಾಭ್ಯಾಸ ಪ್ರತಿ ಯೊಬ್ಬರ ಜೀವನ ಶೈಲಿಯ ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿ ಕಾರಿ ಡಾ.ಕೆ.ರಾಕೇಶ್‌ಕುಮಾರ್ ಕರೆ ನೀಡಿದರು. ಯೋಗ ಪ್ರತಿಯೊಬ್ಬರ ಬದುಕಿನಲ್ಲಿ ಬೇಕು, ಯೋಗದಿಂದ ಜೀವನದಲ್ಲಿ ಕಾಡುವ ಹಲವು ರೋಗ- ರುಜಿನಗಳಿಂದ ದೂರ ಇರಬಹುದು ಎಂದು ಹೇಳಿದರು. ಪ್ರತಿದಿನ ಯೋಗಾ ಭ್ಯಾಸ ಮಾಡುವುದರಿಂದ ನಮ್ಮ ಜೀವನ ಶೈಲಿ ಬದಲಾಗುವುದರ ಜತೆಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗು ವುದರೊಂದಿಗೆ ಉತ್ತಮ ಆರೋಗ್ಯ ಹೊಂದಬಹುದು ಎಂದರು.