ಬೆಂಗಳೂರು: ಸಿಎಲ್ ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ 57 ಶಾಸಕರು ಹಾಜರಾಗಿದ್ದು, ಹಲವು ಶಾಸಕರು ಗೈರು ಹಾಜರಾಗಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಟ್ಟು ಎಂಟು ಮಂದಿ ಶಾಸಕರು ಗೈರು ಹಾಜರಾಗಿದ್ದು, ಇದರಲ್ಲಿ ಆರು ಮಂದಿ ಶಾಸಕರು ಗೈರು ಹಾಜರಿಗೆ ಕಾರಣ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಸಂಡೂರು ಶಾಸಕ ಇ.ತುಕಾರಾಂ, ಶ್ಯಾಮನೂರು ಶಿವಶಂಕರಪ್ಪ, ಅಂಜಲಿ ನಿಂಬಾಳ್ಕರ್, ಡಾ.ಸುಧಾಕರ್, ಎಂಟಿಬಿ ನಾಗರಾಜ್, ರಾಜೇಗೌಡ, ಖನಿಜಾ ಫಾತಿಮಾ, ರೋಷನ್ ಬೇಗ್ ಸಭೆಗೆ ಗೈರಾಗಿದ್ದಾರೆ.
ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ, ಬಳ್ಳಾರಿ ಗ್ರಾಮೀಣದ ನಾಗೇಂದ್ರ, ಭದ್ರಾವತಿ ಶಾಸಕ ಸಂಗಮೇಶ್ ಕೂಡಾ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಗದ್ದಲ:
ಪಕ್ಷಕ್ಕೆ ದ್ರೋಹ ಎಸಗಿ ಹೋಗಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಶಾಸಕಾಂಗ ಸಭೆಯಲ್ಲಿ ಬಹುತೇಕ ಶಾಸಕರು ಒತ್ತಾಯಿಸಿರುವುದಾಗಿ ವರದಿ ತಿಳಿಸಿದೆ.