Advertisement
ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಜೆಟ್ ಕುರಿತು ಹಲವರಲ್ಲಿ ಒಂದೊಂದು ರೀತಿಯ ವ್ಯಾಖ್ಯಾನಗಳಿವೆ. ಹಲವರಲ್ಲಿ ತಪ್ಪುಗ್ರಹಿಕೆಗಳಿವೆ ಯಾರೂ ತಪ್ಪು ಗ್ರಹಿಕೆಗೆ ಒಳಗಾಗಬೇಕಿಲ್ಲ ಎಂದರು.
Related Articles
Advertisement
ವಾಹನ ದಟ್ಟನೆ ಸರಿಪಡಿಸಲು ಎಲಿವೇಟೆಟ್ ರೋಡ್ ನಿರ್ಮಿಸಲು 2006 ರಲ್ಲೇ ನಾನು ತೀರ್ಮಾನ ಮಾಡಿದ್ದೆ. ಹೆಬ್‌ಬಾಳದಿಂದ ಫ್ಲೈಓವರ್ ಮಾಡಲು 1000 ಕೋಟಿ ರೂ ಮೀಸಲಿಟ್ಟಿದ್ದೇವೆ. ಬೆಂಗಳೂರು ನಗರಕ್ಕೆ 11,000 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಇದನ್ನು ಅಶೋಕ ಚಕ್ರವರ್ತಿ ಅರ್ಥ ಮಾಡಿಕೊಳ್ಳಬೇಕು ಎಂದು ಆರ್ .ಅಶೋಕ್‌ಗೆ ತಿರುಗೇಟು ನೀಡಿದರು.
ಪೆಟ್ರೋಲ್ ದರ ದಕ್ಷಿಣ ಭಾರತದಲ್ಲೇ ನಮ್ಮಲ್ಲಿ ಕಡಿಮೆ
ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ಹೆಚ್ಚಳದ ಕುರಿತು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ ಪೆಟ್ರೋಲ್ ಮೇಲಿನ ಸೆಸ್ 30% ರಿಂದ 32 %ಗೆ ಹೆಚ್ಚಳ ಮಾಡಿದ್ದೇವೆ. ಡಿಸೇಲ್ ಮೇಲಿನ ಸೆಸ್ 19 % ನಿಂದ ಸೆಸ್ 21 % ಗೆ ಏರಿಕೆ ಮಾಡಿದ್ದೇವೆ. ದಕ್ಷಿಣ ಭಾರತದಲ್ಲಿ ಪೆಟ್ರೋಲ್ ಬೆಲೆ ನಮ್ಮಲ್ಲಿ ಕಡಿಮೆ ಇದೆ ಇದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು.ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಲೀಟರ್‌ಗೆ 81.23 ರೂಪಾಯಿ ಇದೆ. ನಮ್ಮಲ್ಲಿ 77.91 ರೂಪಾಯಿ ಇದೆ. ಈ ಬಗ್ಗೆ ಬಿಜೆಪಿಯವರು ಬಾಯ್‌ಬಿಡಲಿ ಎಂದರು.
ಕೇಂದ್ರ ಸರ್ಕಾರದ ವತಿಯಿಂದ ಒಂದು ಬಿಡಿಗಾಸು ಕೊಡುವ ಯೋಗ್ಯತೆ ನಿಮಗಿಲ್ಲ. ಸದನಕ್ಕೆ ಬನ್ನಿ ಸೋಮವಾರ.ಚರ್ಚೆಗೆ ಸಿದ್ದನಾಗಿದ್ದೇನೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.
ಖಾಸಗಿಯವರ ಸಾಲ ಯಡಿಯೂರಪ್ಪ ಮನ್ನಾ ಮಾಡ್ತಾರೆ!ಸುದ್ದಿಗಾರರು ಖಾಸಗಿ ಸಾಲ ಮನ್ನಾ ವಿಚಾರ ಕೇಳಿದಾಗ ಅದನ್ನು ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಮನ್ನಾ ಮಾಡುತ್ತಾರೆ ಎಂದು ನಗೆಯಾಡಿದರು. ನಾನು ಖಾಸಗಿಯವರ ಬಳಿ ರೈತರು ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಚರ್ಚೆ ಮಾಡಿದ್ದೆ. ನಮ್ಮ ಸರ್ಕಾರ ಬಂದರೆ ರೈತರು ಸಮಸ್ಯೆಗೆ ಸಿಲುಕದಂತೆ ತಡೆಯಲು ಕ್ರಮ ಕೈಗೊಳ್ಳುವ ಕುರಿತಾಗಿ ಹೇಳಿದ್ದೆ ಎಂದರು. ನಾನು ಪರಮೇಶ್ವರ್ ನೋಟ್ ಪ್ರಿಂಟ್ ಮಾಡ್ತೀವಾ? ಬಿಜೆಪಿಯವರು ನಮ್ಮನ್ನು ಹೊಗಳುವುದಿಲ್ಲ. ಅವರ ಹೊಗಳಿಗೆ ನನಗೆ ಬೇಕಾಗಿಲ್ಲ. ರಾಜ್ಯದ ಜನರ ಬೆಂಬಲ ನನಗಿದ್ದರೆ ಸಾಕು. ಬಿಜೆಪಿಯವರು ಹೊಗಳಿದರೆ ಅವರಿಗೆ ರಾಜಕೀಯ ಮಾಡಲು ಏನೂ ವಿಚಾರವಿರುವುದಿಲ್ಲ. ಸಾಲ ಮನ್ನಾಕ್ಕೆ ಹಣ ಹೊಂದಿಸಲು…ಹಿಂದೆ ಯಡಿಯೂರಪ್ಪನವರೇ ವಿಧಾನಪರಿಷತ್‌ನಲ್ಲಿ ಹೇಳಿದ್ದರಲ್ಲ ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿದ್ದೇವಾ ಎಂದು ನಾನು ಈಗ ಅದನ್ನೇ ಹೇಳುತ್ತೇನೆ ನಾನು ಮತ್ತು ಪರಮೇಶ್ವರ್ ಎನು ನೋಟ್ ಪ್ರಿಂಟ್ ಮಾಡುವ ಯಂತ್ರ ಇಟ್ಟುಕೊಂಡಿದ್ದೇವಾ. ಕೇಂದ್ರ ಸರ್ಕಾರ ನಮಗೆ ವಿಶೇಷ ಅಧಿಕಾರವೇನಾದರೂ ನೀಡಿದೆಯಾ ಎಂದು ಕಿಡಿ ಕಾರಿದರು. ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಿದೆ ನಾನು ಇಂದು ಉತ್ತಮವಾದ ಬಜೆಟ್ ಮಂಡಿಸಲು ಕಾಂಗ್ರೆಸ್ ಮುಖಂಡರು ಸಂಪೂರ್ಣ ಸಹಕಾರ ನೀಡಿದ್ದಾರೆ. ರಾಹುಲ್ ಗಾಂಧಿ ಅವರೇ ಬೆಳಗ್ಗೆ ಸಾಲ ಮನ್ನಾ ಮಾಡುವ ಕುರಿತು ಟ್ವೀಟ್ ಮಾಡಿದ್ದರು. ಇದು ನಮ್ಮ ಹೊಂದಾಣಿಕೆ ಎಷ್ಟು ಉತ್ತಮವಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.