Advertisement

Temperature ಏರಿಕೆಯಿಂದಾಗಿ ಬಿಕೋ ಎನ್ನುತ್ತಿರುವ ಗೋಕರ್ಣದ ಹಲವು ಬೀಚ್‌ಗಳು

05:06 PM Apr 05, 2024 | Team Udayavani |

ಗೋಕರ್ಣ : ಕರಾವಳಿ ಪ್ರದೇಶಗಳಲ್ಲಿ ಈಗ ತಾಪಮಾನ ಏರಿಕೆಯಿಂದಾಗಿ ಪ್ರವಾಸಿ ತಾಣಗಳು ಬಿಕೋ ಎನ್ನುವಂತಾಗಿದೆ. ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಇಲ್ಲಿಯ ಓಂ ಬೀಚ್, ಕುಡ್ಲೆ ಬೀಚ್, ಬೇಲೆಕಾನ ಸೇರಿದಂತೆ ಸಾಕಷ್ಟು ಕಡಲ ತೀರಗಳಲ್ಲಿ ಪ್ರವಾಸಿಗರು ಕಂಡುಬರುತ್ತಿಲ್ಲ. ಭಾರಿ ಪ್ರಮಾಣದಲ್ಲಿ ತಾಪಮಾನ ಇರುವುದರಿಂದ ಅದನ್ನು ತಡೆದುಕೊಳ್ಳಲಾಗದೇ ಸಂಜೆಯ ನಂತರ ಕಡಲ ತೀರಗಳಲ್ಲಿ ಪ್ರವಾಸಿಗರು ಕಂಡುಬರುವಂತಾಗಿದೆ.

Advertisement

ಸಮುದ್ರದಿಂದ ಬೀಸುವ ಉಷ್ಣ ಗಾಳಿಯಿಂದಾಗಿ ಇನ್ನಷ್ಟು ಶೆಕೆ ಹೆಚ್ಚಾಗುತ್ತಿದ್ದು, ಇದು ಒಂದು ರೀತಿಯಲ್ಲಿ ಜಾಗತಿಕ ತಾಪಮಾನ ಎನ್ನುವಷ್ಟರ ಮಟ್ಟಿಗೆ ಈ ಬಾರಿ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹೀಗಾಗಿ ಸಹಜವಾಗಿಯೇ ಬೀಚ್, ಇನ್ನಿತರ ಸ್ಥಳಗಳಿಗೆ ಪ್ರವಾಸಿಗರು ತೆರಳುತ್ತಿಲ್ಲ.ಏಪ್ರಿಲ್ ಮೇ ತಿಂಗಳು ಹೋಟೆಲ್, ಹೋಮ್‌ಸ್ಟೇ, ರೆಸಾರ್ಟ್ ನವರಿಗೆ ಸಹಜವಾಗಿಯೇ ಹೆಚ್ಚಿನ ಆದಾಯ ಬರುತ್ತಿದ್ದವು. ಕೆಲವು ತರಗತಿಗಳ ಪರೀಕ್ಷೆಗಳು ಮುಗಿದಿದ್ದರಿಂದಾಗಿ ಸಹಜವಾಗಿಯೇ ಈ ಎರಡು ತಿಂಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದರು.

ಆದರೆ ಈಗಿನ ವಾತಾವರಣ ಗಮನಿಸಿದರೆ ವೈದ್ಯರು ಕೂಡ ಬಿಸಿಲಿನ ಸಮಯದಲ್ಲಿ ಹೊರಗಡೆ ಓಡಾಡಬೇಡಿ ಎಂದು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಬೀಚ್‌ಗಳು ಬಿಕೋ ಎನ್ನುತ್ತಿದ್ದರೆ, ಇನ್ನೊಂದೆಡೆ ಹೋಟೆಲ್, ರೆಸಾರ್ಟ್ ನವರಿಗೆ ಆದಾಯ ಇಳಿಮುಖವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next