Advertisement

ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಮನು ಭಾಕರ್‌ಗೆ ಚಿನ್ನ

06:40 AM Mar 25, 2018 | Team Udayavani |

ಸಿಡ್ನಿ: ಪ್ರಚಂಡ ಫಾರ್ಮ್ನಲ್ಲಿರುವ ಪಿಸ್ತೂಲ್‌ ತಾರೆ ಮನು ಭಾಕರ್‌ ಅವರು ಸಿಡ್ನಿಯಲ್ಲಿ ಸಾಗುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನ ವನಿತೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

Advertisement

ಮೆಕ್ಸಿಕೋದಲ್ಲಿ ಇತ್ತೀಚೆಗೆ ನಡೆದ ಸೀನಿಯರ್‌ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಅವಳಿ ಚಿನ್ನ ಗೆದ್ದು ಸುದ್ದಿ ಮಾಡಿದ್ದ 16ರ ಹರೆಯದ ಮನು ಥಾçಲಂಡಿನ ಕನ್ಯಾಕಾರ್ನ್ ಹಿರುಪೋಯಮ್‌ ಅವರನ್ನು ಸೋಲಿಸಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು. ಮನು 235.9 ಅಂಕ ಪಡೆದು ಚಿನ್ನ ತನ್ನದಾಗಿಸಿಕೊಂಡರೆ ಹಿರುಪೋಯಮ್‌ ಬೆಳ್ಳಿ ಮತ್ತು ಚೀನದ ಕೈಮಾನ್‌ ಲು ಕಂಚು ಪಡೆದರು. ಮನು ಸ್ಪರ್ಧಿಸಿದ್ದ ವಿಭಾಗದಲ್ಲಿ ಆಡಿದ್ದ ಭಾರತದ ಇನ್ನೋರ್ವ ಶೂಟರ್‌ ದೇವಾಂಶಿ ರಾಣಾ ಫೈನಲಿಗೆ ಅರ್ಹತೆ ಗಳಿಸಿದ್ದರೂ ಪದಕ ಗೆಲ್ಲಲು ವಿಫ‌ಲರಾಗಿ ನಿರಾಶೆ ಅನುಭವಿಸಿದರು.

ಪುರುಷರ 10 ಮೀ. ಪಿಸ್ತೂಲ್‌ ವಿಭಾಗದಲ್ಲಿ ಭಾರತದ ಗೌರವ್‌ ರಾಣ ಬೆಳ್ಳಿ ಗೆದ್ದರೆ ಅನ್ಮೋಲ್‌ ಜೈನ್‌ ಕಂಚಿನ ಪದಕ ಪಡೆದರು. ರಾಣ 233.9 ಅಂಕ ಪಡೆದರೆ ಅನ್ಮೋಲ್‌ 215.1 ಅಂಕ ಪಡೆಯಲಷ್ಟೇ ಶಕ್ತರಾಗಿದ್ದರು. ಚಿನ್ನ ಗೆದ್ದ ಚೀನದ ಝೆಹವೊ ವಾಂಗ್‌ 242.5 ಅಂಕ ಗಳಿಸಿದ್ದರು.

ಮನು, ರಾಣಾ ಮತ್ತು ಮಹಿಮಾ ಅಗರ್ವಾಲ್‌ ಅವರನ್ನು ಒಳಗೊಂಡ ಭಾರತೀಯ ತಂಡವು 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಜಯಿಸಿದ್ದರೆ ಚೀನ ಬೆಳ್ಳಿ ಮತ್ತು ಥಾçಲಂಡ್‌ ಕಂಚು ಜಯಿಸಿತು. ಭಾರತದ ಚೀಮಾ ರಾಣಾ ಮತ್ತು ಅನ್ಮೋಲ್‌ ಅವರು ತಂಡ ಸ್ಪರ್ಧೆಯಲ್ಲಿ ಚೀನದ ಲಿಯು, ವಾಂಗ್‌ ಮತ್ತು ತಾಂಗ್‌ ಅವರನ್ನು ಕೆಡಹಿ ಚಿನ್ನ ಜಯಿಸಿದೆ.ಭಾರತ ಇಷ್ಟರವರೆಗೆ ಈ ಕೂಟದಲ್ಲಿ ಐದು ಚಿನ್ನ ಸಹಿತ 11 ಪದಕ ಪಡೆದಿದೆ. ಚೀನ 13 ಪದಕ ಗೆದ್ದು ಅಗ್ರಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next