ರಾಯಚೂರು: ಮಂತ್ರಾಲಯದಲ್ಲಿ 2020ರಲ್ಲಿ ನಡೆದ ಗುರುವೈಭವೋತ್ಸವ ವೇಳೆ ನಟ ಪುನೀತ್ ರಾಜ್ ಕುಮಾರ್ ಮಾತನಾಡುವಾಗ ರಾಯರ ಪ್ರಭಾವಳಿ ಮುಂಭಾರಗೊಂಡಿದ್ದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟನೆ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಮಾತನಾಡುವಾಗ ಮುಂದಿನ ಆರಾಧನೆ ಬಂದಾಗ ಹಾಡು ಹಾಡುವುದಾಗಿ ಹೇಳುತ್ತಿದ್ದಂತೆ ಉಯ್ಯಾಲೆಯಲ್ಲಿದ್ದ ರಾಯರ ಪ್ರಭಾವಳಿ ಮುಂಭರಗೊಂಡು ವೀಣೆ ಅಲುಗಾಡಿತ್ತು. ಇದು ಪುನೀತ್ ಸಾವಿನ ಮುನ್ಸೂಚನೆ ಎಂಬಂತೆ ಎಲ್ಲೆಡೆ ವೀಡಿಯೋ ವೈರಲ್ ಆಗುತ್ತಿದೆ. ಈ ನಿಟ್ಟಿನಲ್ಲಿ ತಪ್ಪು ಸಂದೇಶ ರವಾನೆ ಮಾಡದಂತೆ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಇಲ್ಲೇ ಎಲ್ಲೋ ಹೋಗಿದ್ದಾನೆ ಎನಿಸುತ್ತಿದೆ.. ನನ್ನ ಮಗನನ್ನೇ ಕಳೆದುಕೊಂಡೆ..: ಶಿವಣ್ಣನ ಕಣ್ಣೀರು
ರಾಜಕುಮಾರ ಕುಟುಂಬಸ್ಥರು ರಾಘವೇಂದ್ರ ಸ್ವಾಮಿಗಳ ಅಂತರಂಗದ ಭಕ್ತರಾಗಿದ್ದರು. ರಾಜ್ ಕುಮಾರ್ ಕುಟುಂಬ ಸದಸ್ಯರು ರಾಯರ ಅಪ್ಪಣೆಯಂತೆ ಶುಭ ಕಾರ್ಯಗಳು ಮಾಡುತ್ತಿದ್ದರು. ರಾಯರ ಜನ್ಮ ದಿನದ ವೇಳೆ ಪುನೀತ್ ಮಠಕ್ಕೆ ಆಗಮಿಸಿದ್ದರು.
ಪುನೀತ್ ಮಾತನಾಡುವ ವೇಳೆ ಆಕಸ್ಮಿಕವಾಗಿ ಪ್ರಭಾವಳಿ ಮತ್ತು ವೀಣೆ ಅಲುಗಾಡಿದೆ. ಉಯ್ಯಾಲೆ ಮೇಲೆ ವೀಣೆ ಇಟ್ಟು ತೂಗುವಾಗ ವೀಣೆ ಜಾರಿದೆ. ಆದರೆ, ಈ ಘಟನೆಗೂ ಪುನೀತ್ ಸಾವಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಪುನೀತ್ ದೇಹದಿಂದ ಪಂಚಭೂತಗಳಲ್ಲಿ ಲೀನವಾಗಿದ್ದರೂ ಅವರು ಅಭಿಮಾನಿಗಳ ಹೃದಯದಲ್ಲಿ ಸದಾ ಇರಲಿದ್ದಾರೆ. ವಿಡಿಯೋ ಇಟ್ಟುಕೊಂಡು ಅನಗತ್ಯ ಚರ್ಚೆ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪರಮಾತ್ಮನ ಪಾದ ಸೇರಿದ ಬೆಟ್ಟದ ಹೂವು