Advertisement
ಮುಂಗಾರು ಮಳೆಯ ಹನಿಗಳು ಭೂಮಿ ಯನ್ನು ಸ್ಪರ್ಶಿಸುತ್ತಿದ್ದಂತೆ ನಿದ್ದೆಯಿಂದೆದ್ದು ಭೂಮಿಯ ಮೇಲ್ಮೆŒ„ಗೆ ಬರುವ ಕಪ್ಪೆಗಳು ಚಿತ್ರ ವಿಚಿತ್ರ ಶಬ್ದಗಳನ್ನು ಉಂಟುಮಾಡಿ ವಟಗುಟ್ಟುತ್ತವೆ.
ಮಳೆಗಾಲ ಮತ್ತು ಚಳಿಗಾಲದಲ್ಲಿ ಅಲ್ಲಿಲ್ಲಿ ಕುಪ್ಪಳಿಸುವ ವಿವಿಧ ಜಾತಿಯ, ವಿವಿಧ ಗಾತ್ರದ, ವಿವಿಧ ಬಣ್ಣಗಳ ಕಪ್ಪೆಗಳ ಲೋಕವೇ ನಮ್ಮೆದುರು ತೆರೆದುಕೊಳ್ಳುತ್ತದೆ. ಮನೆಯಂಗಳದಲ್ಲಿ, ಬಾಗಿಲಿನ ಸಂದಿಯಲ್ಲಿ ಎಲ್ಲೆಲ್ಲೂ ಛಂಗನೆ ನೆಗೆಯುವ ಕಪ್ಪೆಗಳೆ. ಶಾಲೆಗೆ ಹೋಗುವ ಹಾದಿಯಲ್ಲಿ ಕಪ್ಪೆಗೆ ಕಲ್ಲು ಬಿಸಾಡುವ ತುಂಟ ಮಕ್ಕಳಿಗೆ ಆಟವಾಡಲು ತೋಡು, ಕೊಳದ ನೀರಿನಲ್ಲಿ ತೇಲಾಡುವ ಕಪ್ಪೆಗಳ ಗುಂಪೆಂದರೆ ಪ್ರಿಯ. ಮುಂಗಾರು ಪ್ರಾರಂಭವಾಗುವ ಮುನ್ನ ಕಪ್ಪೆಗಳ ಕೂಗು ಮುಗಿಲು ಮುಟ್ಟುತ್ತದೆ. ಇದು ಕಪ್ಪೆಗಳ ಸಂತಾನೋತ್ಪತ್ತಿಯ ಸಮಯವೂ ಹೌದು.ಮಳೆಗಾಗಿ ಆಕಾಶಕ್ಕ ದೃಷ್ಟಿನೆಟ್ಟು ಸೋತು ಹೋದ ಕಂಗಳಿಗೆ ಈಗ ಕಪ್ಪೆಗಳ ಕಲರವ ಕೊಂಚ ಸಮಾಧಾನ ಪಡುವಂತೆ ಮಾಡಿದೆ. ಮುಂಗಾರು ಮಳೆ ಕೆಲವೇ ದಿನಗಳಲ್ಲಿ ಸುರಿಯುವ ಭರವಸೆ ಮೂಡಿದೆ.
Related Articles
Advertisement
– ವಿದ್ಯಾಗಣೇಶ್ ಆಣಂಗೂರು