Advertisement
ಪಶ್ಚಿಮ ಘಟ್ಟದಂಚಿನ ಕಾರ್ಕಳ ತಾ| ಹೆಚ್ಚು ಮಳೆಯಾಗುವ ಪ್ರದೇಶ. ಮಳೆಗಾಲದ ಅನಂತರವೂ ಈ ಭಾಗದಲ್ಲಿ ನಿರಂತರ ಅಕಾಲಿಕ ಮಳೆಯಾಗಿದೆ. ಜೂನ್‌ನಿಂದ ಇಲ್ಲಿ ತನಕ ಪ್ರತಿ ತಿಂಗಳು ಮಳೆಯಾಗಿದೆ. ತಾ|ನಲ್ಲಿರುವ ಮಳೆ ಮಾಪನ ಕೇಂದ್ರಗಳ ಅಂಕಿ ಅಂಶಗಳೇ ಈ ಬಗ್ಗೆ ಹೇಳುತ್ತಿವೆ.
2021ರ ಜನವರಿಯಲ್ಲಿ (ಮಿ.ಮೀ.ಗಳಲ್ಲಿ) ಕಾರ್ಕಳ 88.6, ಇರ್ವತ್ತೂರು 124.8, ಅಜೆಕಾರು 92.8, ಸಾಣೂರು 146.2, ಕೆದಿಂಜೆ 0, ಮುಳಿಕಾರು, 185.8, ಕೆರ್ವಾಶೆ 119.8 ಮಳೆಯಾಗಿದೆ. 2021ರ ಫೆಬ್ರವರಿಯಲ್ಲಿ (ಮಿ.ಮೀ. ಗಳಲ್ಲಿ) ಕಾರ್ಕಳ ಇರ್ವತ್ತೂರು 8.6, ಅಜೆಕಾರು 2.6 ಸಾಣೂರು 7.0 ಕೆದಿಂಜೆ, 2.0,ಮುಳಿಕಾರು,48.0, ಕೆರ್ವಾಶೆ 11.8 ಮಿ.ಮೀ ಮಳೆಯಾಗಿದೆ.
Related Articles
Advertisement
ಕೃಷಿ ಕ್ಷೇತ್ರದ ಮೇಲೆ ಪರಿಣಾಮಹವಾಮಾನ ವೈಪರೀತ್ಯ, ವಾಯುಭಾರ ಕುಸಿತದ ಕಾರಣ ವಾತಾವರಣದಲ್ಲಿ ಬದಲಾವಣೆ ಆಗಿ ಅಕಾಲಿಕ ಮಳೆಗೆ ಕಾರಣವಾಗಿದೆ.
ಋತು ಬದಲಾವಣೆ ಕೃಷಿಯ ಮೇಲೆ ಒಂದಷ್ಟು ನಷ್ಟವನ್ನು ತಂದೊಡ್ಡಲಿದೆ. ನಾನಾ ಪರಿಣಾಮಗಳು ರೈತರ ಆರ್ಥಿಕ ಸ್ಥಿತಿಯ ಮೇಲೆ ಭಾರೀ ತೊಂದರೆ ಉಂಟು ಮಾಡುವ ಸಾಧ್ಯತೆಗಳೇ ಹೆಚ್ಚು. 2021 ರೈತರಿಗೆ ಫಲಪ್ರದ ವರ್ಷವಾಗುವುದಿಲ್ಲವೋ ಎನ್ನುವ ಆತಂಕ ರೈತರನ್ನು ಕಾಡಲಾರಂಭಿಸಿದೆ. ಕೆದಿಂಜೆಯಲ್ಲಿ ಕಡಿಮೆ ಮಳೆ
ಯುಗಾದಿ ಅನಂತರದ ಎಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯಾಗುವುದು ಇಲ್ಲಿ ವಾಡಿಕೆ. ಆದರೆ ಕಳೆದ ಮೇ, ಜೂನ್ ತಿಂಗಳಿನಿಂದ ಆರಂಭಗೊಂಡ ಮಳೆ ಮುಂಗಾರು ಮುಗಿದ ಬಳಿಕ ಈ ವರೆಗೂ ಈ ಭಾಗದಲ್ಲಿ ಮುಂದುವರಿದಿದೆ.
ಕಾರ್ಕಳ, ಇರ್ವತ್ತೂರು, ಅಜೆಕಾರು, ಸಾಣೂರು, ಕೆದಿಂಜೆ, ಮುಳಿಕಾರು (ಈದು) ಕೆರ್ವಾಶೆ ಮಳೆ ಮಾಪನ ಕೇಂದ್ರಗಳಿವೆ.
ಈ ಮಳೆ ಮಾಪನ ಕೇಂದ್ರಗಳಲ್ಲಿ ಮಳೆ ಪ್ರಮಾಣವನ್ನು ದಾಖಲಿಸಲಾಗುತ್ತದೆ. ಈ ಭಾಗಗಳಲ್ಲಿ ಕೆದಿಂಜೆಯಲ್ಲಿ ಕಡಿಮೆ ಸುರಿದಿದ್ದು, ಉಳಿದ ಮಾಪನ ಕೇಂದ್ರಗಳಲ್ಲಿ ಮಳೆ ಸುರಿದಿರುವುದು ದಾಖಲಾಗಿದೆ. – ಬಾಲಕೃಷ್ಣ ಭೀಮಗುಳಿ