ಬಾಗಲಕೋಟೆ: ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಯುವ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಯಾವುದೇ ರೂಪದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಅ ಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದು ಭ್ರಷ್ಟಾಚಾರವಾಗುತ್ತದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಧೀಕ್ಷಕಿ ಅನಿತಾ ಹದ್ದಣ್ಣವರ ಹೇಳಿದರು.
ನವನಗರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವಕರ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಸೆ ಇರಬೇಕೆ ಹೊರತು ದುರಾಸೆ ಇರಬಾರದು. ಯಾವಾಗ ದುರಾಸೆ ಉತ್ಪತ್ತಿಯಾಗುತ್ತದೆಯೋ ಆಗ ಭ್ರಷ್ಟಾಚಾರ ಉಂಟಾಗುತ್ತದೆ. ಭ್ರಷ್ಟಾಚಾರವನ್ನು ಸರಕಾರವು ಹಿಂದಿನಿಂದ ತಡೆಗಟ್ಟುತ್ತ ಬಂದಿದ್ದು, 1988ರಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಪ್ರಾರಂಭಿಸಿ ಸದರಿ ಸಂಸ್ಥೆಯ ಮೂಲಕ ಯಾರು ಭ್ರಷ್ಟಚಾರದಲ್ಲಿ ತೊಡಗುವರೋ ಅವರಿಗೆ ಕಠಿಣ ಶಿಕ್ಷೆ ಮತ್ತು ಕಾನೂನನ್ನು ಜಾರಿಗೆ ತಂದಿದೆ. ಲಂಚ ಕೊಡುವವರು ಮತ್ತು ತೆಗೆದುಕೊಳ್ಳುವವರು ಮಾತ್ರವಲ್ಲದೇ ಯಾರು ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಗೊತ್ತಿರುವ ಮಾಹಿತಿಯನ್ನು ನೀಡುವದಿಲ್ಲವೋ ಅವರೂ ಸಹ ಭ್ರಷ್ಟಾಚಾರದಲ್ಲಿ ತೊಡಗಿದಂತೆಯೇ ಎಂದು ತಿಳಿಸಿದರು. ಈಚೆಗಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.
ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ತಾರತಮ್ಯ ಮಾಡುವುದು ಇದಕ್ಕೆ ಕಾರಣವಾಗಿದೆ. ಈ ರೀತಿ ತಾರತಮ್ಯ ಮಾಡುವುದರಿಂದ ಹೆಣ್ಣು ಮಕ್ಕಳಲ್ಲಿ ಕೀಳರಿಮೆ ಬೆಳೆಯುತ್ತದೆ. ಶಿಕ್ಷಣ, ರಕ್ಷಣೆ ಒಳಗೊಂಡು ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ದುರ್ಬಲರು ಎಂಬುವಂತೆ ಬಿಂಬಿಸುವುದರಿಂದ ತಮ್ಮ ರಕ್ಷಣೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ದುರ್ಬಲರಾಗುತ್ತಾರೆ
ಎಂದರು.
ಭಾಷಣ ಸ್ಪರ್ಧೆಯಲ್ಲಿ ಒಟ್ಟು 30 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಪ್ರಥಮ ಸ್ಥಾನವನ್ನು ರೂಪಾ ಸಮೀರ, ದ್ವಿತೀಯ ಸ್ಥಾನ ಸೃಷ್ಠಿ ಗಡದ ಹಾಗೂ ತೃತೀಯ ಸ್ಥಾನ ರೂಷನಿ ಮನಿಯಾರ ಪಡೆದುಕೊಂಡರು. ವಿಜಯಪುರದ ಕರ್ನಾಟಕ ಲೋಕಾಯುಕ್ತ ಇಲಾಖೆಯ ಪೊಲೀಸ್ ಅ ಧೀಕ್ಷಕಿ ಅನಿತಾ ಹದ್ದಣ್ಣವರ ವಿಜೇತರಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳಾದ ಶ್ರೇಯಾ ಜೈನ್ ಮತ್ತು ಶಾಹಿನ ಅಂತಾಪುರ ಭ್ರಷ್ಟಾಚಾರ ವಿರೋಧಿ ವಿಷಯದ ಬಗ್ಗೆ ಭಾಷಣ ಮಾಡಿದರು.
ಕೇಶವ ಸಾಲಮಂಟಪಿ, ಅಲ್ಪಸಂಖ್ಯಾತರ ಇಲಾಖೆಯ ಉಪ ನಿರ್ದೇಶಕ ಎಂ.ಎನ್. ಮೇಲಿನಮನಿ, ಪೊಲೀಸ್ ಉಪಾಧೀಕ್ಷಕಿ ಅರುಣ ನಾಯಕ, ಪೊಲೀಸ್ ನಿರೀಕ್ಷಕ ಎಂ.ಎಚ್. ಬಿದರಿ, ಪೊಲೀಸ್ ನಿರೀಕ್ಷಕ ಮಹೇಂದ್ರಕುಮಾರ ನಾಯಕ, ಅಲ್ಪ ಸಂಖ್ಯಾತ ರ ಮೊರಾರ್ಜಿ ದೇಸಾಯಿ ಪದವಿ
ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎನ್.ಗರಗ ಉಪಸ್ಥಿತರಿದ್ದರು. ರಾಜಶೇಖರ ಬುಳ್ಳಾ ನಿರೂಪಿಸಿದರು. ಸಂತೋಷ ವಟಾರ ವಂದಿಸಿದರು.