Advertisement

ಕಾಮನ್‌ವೆಲ್ತ್‌ ಗೇಮ್ಸ್‌: ಭಾರತೀಯ ಹಾಕಿ ತಂಡಕ್ಕೆ ಮನ್‌ಪ್ರೀತ್‌ ನಾಯಕ

07:30 AM Mar 14, 2018 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳು ಆಸ್ಟ್ರೇಲಿಯದ ಗೋಲ್ಟ್ ಕೋಸ್ಟ್‌ ನಲ್ಲಿ ಆರಂಭ ವಾಗಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್‌ ಗೇಮ್ಸ್‌ ನಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಭಾರತೀಯ ಹಾಕಿ ತಂಡವನ್ನು ಮನ್‌ಪ್ರೀತ್‌ ಸಿಂಗ್‌ ಮುನ್ನಡೆಸಲಿದ್ದಾರೆ. 

Advertisement

18 ಸದಸ್ಯರ ಭಾರತೀಯ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಿದೆ. “ಬಿ’ ಬಣದಲ್ಲಿ ಪಾಕಿಸ್ಥಾನ, ಮಲೇಶ್ಯ, ವೇಲ್ಸ್‌ ಮತ್ತು ಇಂಗ್ಲೆಂಡ್‌ ಜತೆ ಇರಲಿರುವ ಭಾರತವು ಎಪ್ರಿಲ್‌ 7ರಂದು ಪಾಕಿಸ್ಥಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

18 ಸದಸ್ಯರ ತಂಡವನ್ನು ಮಿಡ್‌ಫಿಲ್ಡರ್‌ ಮನ್‌ಪ್ರೀತ್‌ ಸಿಂಗ್‌ ಮುನ್ನಡೆಸಲಿದ್ದಾರೆ. ಉಪನಾಯಕನ ಜವಾಬ್ದಾರಿಯನ್ನು ಚಿಂಗಲಸನ ಸಿಂಗ್‌ ಕಾಂಗು ಜಮ್‌ ವಹಿಸಲಿದ್ದಾರೆ. ಮನ್‌ಪ್ರೀತ್‌ ಅವರ ನಾಯ ಕತ್ವದಲ್ಲಿ ಭಾರತೀಯ ತಂಡ 2017ರಲ್ಲಿ ಏಶ್ಯ ಕಪ್‌ ಜಯಿಸಿದ್ದರೆ ಒಡಿಶಾದಲ್ಲಿ ನಡೆದ ಪುರುಷರ ಹಾಕಿ ವಿಶ್ವ ಲೀಗ್‌ನ ಫೈನಲ್‌ನಲ್ಲಿ ಕಂಚಿನ ಪದಕ ಗೆಲ್ಲಲು ಯಶಸ್ವಿಯಾಗಿತ್ತು.

ರಕ್ಷಣೆಯಲ್ಲಿ ಡ್ರ್ಯಾಗ್‌ಫ್ಲಿಕ್‌ ತಜ್ಞ  ರುಪಿಂದರ್‌ ಪಾಲ್‌ ಸಿಂಗ್‌ ಭಾರತವನ್ನು ಆಧರಿಸಲಿದ್ದಾರೆ. ಅವರಿಗೆ ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಕೊಥಾಜಿತ್‌ ಸಿಂಗ್‌, ಗುರೀಂದರ್‌ ಸಿಂಗ್‌ ಮತ್ತು ಅಮಿತ್‌ ರೋಹಿದಾಸ್‌ ನೆರವಾಗ ಲಿದ್ದಾರೆ. ಅನುಭವಿ ಗೋಲ್‌ಕೀಪರ್‌ ಪಿಆರ್‌ ಶ್ರೀಜೇಶ್‌ ಗೋಲ್‌ಪೋಸ್ಟ್‌ನಲ್ಲಿ ಎದುರಾಳಿಗೆ ಸಿಂಹಸ್ವಪ್ನ ರಾಗಲಿದ್ದಾರೆ. ನ್ಯೂಜಿಲ್ಯಾಂಡ್‌ ಪ್ರವಾ ಸದಲ್ಲಿ ಶ್ರೀಜೇಶ್‌ ಅಸಾಧಾರಣ ನಿರ್ವಹಣೆ ನೀಡಿ ಭಾರತಕ್ಕೆ ಆಸರೆಯಾಗಿದ್ದರು. ಅವರಿಗೆ 22ರ ಹರೆಯದ ಸೂರಜ್‌ ಕರ್ಕೇನೆರವಾಗಲಿದ್ದಾರೆ. 

ಕಳೆದ ಎರಡು ಕಾಮನ್‌ವೆಲ್ತ್‌ ಗೇಮ್ಸ್‌ಗಳಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದಿತ್ತು. ಆಸ್ಟ್ರೇಲಿಯ ಮೊದಲ ಸ್ಥಾನ ಪಡೆದಿತ್ತು. ಈ ಸಲ ಚಿನ್ನ ಗೆಲ್ಲುವ ವಿಶ್ವಾಸವನ್ನು ಮನ್‌ಪ್ರೀತ್‌ ಸಿಂಗ್‌ ವ್ಯಕ್ತಪಡಿಸಿದ್ದಾರೆ. ಬಣ ಹಂತದಲ್ಲಿ ಉತ್ತಮ ನಿರ್ವಹಣೆ ನೀಡುವುದು ನಮ್ಮ ಮೊದಲ ಗುರಿಯಾಗಿದೆ. ಯಾಕೆಂದರೆ ನಮ್ಮ ಬಣದಲ್ಲಿ ಕೆಲವು ಉತ್ತಮ ತಂಡಗಳಿವೆ. ಬಣದಲ್ಲಿ ಅಗ್ರಸ್ಥಾನ ಪಡೆಯುವುದು ಅತೀ ಮುಖ್ಯವಾಗಿದೆ. ನಾಕೌಟ್‌ನಲ್ಲಿ ನಾವು ಒಂದು ವೇಳೆ ಆಸ್ಟ್ರೇಲಿಯವನ್ನು ಎದುರಿಸಲು ಸಿಕ್ಕಿದರೆ ನಾವು ದೊಡ್ಡ ಸವಾಲನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ ಎಂದು 25ರ ಹರೆಯದ ಮನ್‌ಪ್ರೀತ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next