Advertisement

ಮನೋರಂಜನ್‌ ಹೊಸ ಚಿತ್ರದ “ಬೃಹಸ್ಪತಿ’

03:28 PM Oct 19, 2017 | |

ರವಿಚಂದ್ರನ್‌ ಅವರ ಮಗ ಮನೋರಂಜನ್‌ ಅಭಿನಯದ ಎರಡನೆಯ ಚಿತ್ರದ ಹೆಸರು ಮತ್ತೂಮ್ಮೆ ಬದಲಾಗಿದೆ. ತಮಿಳಿನ “ವಿಐಪಿ’ ಚಿತ್ರದ ರೀಮೇಕ್‌ ಆಗಿರುವ ಈ ಚಿತ್ರಕ್ಕೆ “ಬೃಹಸ್ಪತಿ’ ಎಂದು ಕೊನೆಗೂ ನಾಮಕರಣ ಮಾಡಲಾಗಿದೆ.

Advertisement

ಇದಕ್ಕೂ ಮುನ್ನ ಈ ಚಿತ್ರಕ್ಕೆ “ವಿಐಪಿ’ ಎಂದೇ ನಾಮಕರಣ ಮಾಡಲಾಗಿತ್ತು. ಆ ನಂತರ ಚಿತ್ರತಂಡದವರೆಲ್ಲಾ ಇನ್ನೊಮ್ಮೆ ಚರ್ಚಿಸಿ, ಹೆಸರು ಬದಲಾಯಿಸಿದರು. ಆಗ “ವಿಐಪಿ’ ಬದಲು “ಸನ್‌ ಆಫ್ ರವಿಚಂದ್ರನ್‌’ ಎಂದು ನಾಮಕರಣ ಮಾಡಲಾಯಿತು. ಈಗ ಮತ್ತೆ ಚಿತ್ರತಂಡದವರು ಚಿತ್ರದ ಹೆಸರನ್ನು “ಬೃಹಸ್ಪತಿ’ ಎಂದು ಬದಲಾಯಿಸಿದ್ದು, ಇದೇ ಹೆಸರು ಫೈನಲ್‌ ಆಗಲಿದೆ.

ಅಂದ ಹಾಗೆ, “ಬೃಹಸ್ಪತಿ’ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿದ್ದು, ನಂದಕಿಶೋರ್‌ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣ ಮತ್ತು ವಿ. ಹರಿಕೃಷ್ಣ ಅವರ ಸಂಗೀತವಿದೆ. ಮನೋರಂಜನ್‌ ಎದುರು ಮಿಶ್ತಿ  ಚಕ್ರವರ್ತಿ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಸಿತಾರಾ, ಅವಿನಾಶ್‌, ಸಾಧು ಕೋಕಿಲ, ಪ್ರಕಾಶ್‌ ಬೆಳವಾಡಿ ಮುಂತಾದವರು ನಟಿಸಿದ್ದಾರೆ.

“ಬೃಹಸ್ಪತಿ’ ಚಿತ್ರವು ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next