Advertisement

ಮನೋಜ್‌ ಟಕ್ಕರ್‌ ಶುರು

11:39 AM Apr 25, 2018 | |

ದರ್ಶನ್‌ ಅವರ ಸಂಬಂಧಿ ಮನೋಜ್‌, “ಟಕ್ಕರ್‌’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು. ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತ ನಡೆದಿದೆ. ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ಸರಳವಾಗಿ ಮುಹೂರ್ತ ಮಾಡಲಾಗಿದೆ.

Advertisement

“ಚಕ್ರವರ್ತಿ’ ನಿರ್ದೇಶಕ ಚಿಂತನ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. ನಾಗೇಶ್‌ ಕೋಗಿಲು ಈ ಚಿತ್ರದ ನಿರ್ದೇಶಕರು. ಈ ಹಿಂದೆ ಇವರು “ಹುಲಿರಾಯ’ ಸಿನಿಮಾ ಮಾಡಿದ್ದರು. “ರನ್‌ ಆ್ಯಂಟನಿ’ ಸಿನಿಮಾ ನಿರ್ದೇಶಿಸಿದ್ದ ರಘು ಶಾಸ್ತ್ರಿ “ಟಕ್ಕರ್‌’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ವಿನಯ್‌ ರಾಜ್‌ಕುಮಾರ್‌ ಅಭಿನಯದ ರನ್‌ ಆ್ಯಂಟನಿ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ರಘು ಶಾಸ್ತ್ರಿ ಈ ಚಿತ್ರಕ್ಕೆ ಆಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಇದಕ್ಕೂ ಮುನ್ನ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಮನೋಜ್‌ಗೆ, ನಾಯಕರಾಗಿ ಇದು ಮೊದಲ ಸಿನಿಮಾ.

“ರಾಜಹಂಸ’ ಸಿನಿಮಾದ ಮೂಲಕ ನಾಯಕನಟಿಯಾಗಿ ಸಿನಿಮಾರಂಕ್ಕೆ ಬಂದಿರುವ ರಂಜನಿ “ಟಕ್ಕರ್‌’ ನಾಯಕಿ. ಚಿತ್ರಕ್ಕೆ ಕಿರಣ್‌ ಹಂಪಾಪುರ ಛಾಯಾಗ್ರಹಣ, ಮಣಿಕಾಂತ್‌ ಕದ್ರಿ ಸಂಗೀತ, ಕೆ.ಎಂ. ಪ್ರಕಾಶ್‌ ಸಂಕಲನ, ಡಿಫ‌ರೆಂಟ್‌ ಡ್ಯಾನಿ ಸಾಹಸ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next