Advertisement

Manoj Jarange: ಮರಾಠಾ ಮೀಸಲಾತಿ ಹೋರಾಟಕ್ಕೆ ಜಯ… ಧರಣಿ ಹಿಂಪಡೆದ ಮನೋಜ್ ಜಾರಂಜ್

09:10 AM Jan 27, 2024 | Team Udayavani |

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಗಳಿಗೆ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಹಿಂಪಡೆದಿದ್ದು, ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ತಮ್ಮ ಮನವಿಯನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ.

Advertisement

ಶಿವಸೇನೆ ಮುಖ್ಯಮಂತ್ರಿಯನ್ನು ಹೊಗಳಿದ ಪಾಟೀಲ್, ಶನಿವಾರ ಶಿಂಧೆ ಅವರ ಕೈಯಿಂದಲೇ ಜ್ಯೂಸ್ ಕುಡಿಯುವ ಮೂಲಕ ಉಪವಾಸ ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಜಾರಂಗೆ ಮುಖ್ಯಮಂತ್ರಿಯವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಅಲ್ಲದೆ ನಮ್ಮ ಬೇಡಿಕೆಗಳಿಗೆ ಒಪ್ಪಿಗೆಯನ್ನು ಸೂಚಿಸುವ ಮೂಲಕ ನನ್ನ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದೇನೆ ಅಲ್ಲದೆ ಇಂದು ನಾವು ಮುಖ್ಯಮಂತ್ರಿಗಳಿಂದ ಪತ್ರ ಸ್ವೀಕರಿಸುತ್ತೇವೆ ಬಳಿಕ ಅವರ ಕೈಯಿಂದಲೇ ಜ್ಯೂಸ್ ಕುಡಿಯುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಕೈಬಿಡಲಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ ಬೇಡಿಕೆಗೆ ಆಗ್ರಹಿಸಿ ಜನವರಿ 20 ರಂದು ಜಲ್ನಾದಿಂದ ಪ್ರಾರಂಭವಾದ ಕೋಟಾ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಶನಿವಾರ ಮುಂಬೈ ನಗರವನ್ನು ಪ್ರವೇಶಿಸಲು ಸಜ್ಜಾಗುತ್ತಿದ್ದಂತೆ ಅವರ ಘೋಷಣೆ ಹೊರಬಿದ್ದಿದೆ.

ಮಹಾರಾಷ್ಟ್ರ ಸಚಿವ ಮಂಗಲ್ ಪ್ರಭಾತ್ ಅವರು ಶುಕ್ರವಾರ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದರು ಅಲ್ಲದೆ ತಮ್ಮ ಬೇಡಿಕಗಳನ್ನು ಈಡೇರಿಸುವ ಕುರುತು ಮಾತು ಕೊಟ್ಟಿದ್ದರು ಎಂದು ಹೇಳಲಾಗಿದೆ.

Advertisement

ಈ ಕುರಿತು ಹೇಳಿಕೆ ನೀಡಿದ ಸಚಿವ ಮಂಗಲ್ ಪ್ರಭಾತ್ ಮರಾಠಾ ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಮನೋಜ್ ಮನೋಜ್ ಜಾರಂಗೆ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಆಂದೋಲನಕ್ಕೆ ಇಂದು ಪರಿಹಾರ ಸಿಕ್ಕಿದೆ… ಇಂದು ಜಾರಿಗೆ ತಂದಿರುವ ಸುಗ್ರೀವಾಜ್ಞೆಯಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ,’’ ಎಂದು ಹೇಳಿದರು.

ಇದನ್ನೂ ಓದಿ: Tragedy: ದೆಹಲಿಯಲ್ಲಿ ಭೀಕರ ಬೆಂಕಿ ಅವಘಡ… 9 ತಿಂಗಳ ಮಗು ಸೇರಿ ನಾಲ್ವರು ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next