Advertisement
ಪಣಜಿಯಲ್ಲಿ ಗೋವಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಈ ಸಭೆಯ ನಂತರ ಸಿ.ಟಿ ರವಿ ಸುದ್ಧಿಗಾರರೊಂದಿಗೆ ಮಾತನಾಡಿದರು. ಮೋಪಾ ವಿಮಾನ ನಿಲ್ದಾಣದ ಹೆಸರನ್ನು “ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ” ಎಂದು ಸರ್ಕಾರ ಘೋಷಿಸಿದ ತಕ್ಷಣ, ಮರುನಾಮಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪೋಸ್ಟ್ ಗಳು ವೈರಲ್ ಆಗಿವೆ. ಬಿಜೆಪಿ ವಕ್ತಾರ ಸಾವಿಯೋ ರೋಡ್ರಿಗಸ್ ಕೂಡ ಮೊಪಾದಲ್ಲಿರುವ ವಿಮಾನ ನಿಲ್ದಾಣಕ್ಕೆ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರನ್ನು ಮನೋಹರ್ ಪರಿಕ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾಯಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಮನೋಹರ್ ಪಕ್ಕದಲ್ಲಿ ಪರಿಕ್ಕರ್ ಕೂಡ ಸೇರ್ಪಡೆಯಾಗಲಿದ್ದು, ವಿಮಾನ ನಿಲ್ದಾಣದಲ್ಲಿ ಪರಿಕ್ಕರ್ ಫೋಟೋ ಕೂಡ ರಾರಾಜಿಸಲಿದೆ ಎಂದು ಸಿ. ಟಿ. ರವಿ ಹೇಳಿದರು.
ಗೋವಾದ ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮೋಪಾ ವಿಮಾನ ನಿಲ್ದಾಣವು ಕೆಲಸ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದರು. ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದ ಹೆಸರನ್ನು “ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ” ಎಂದು ಔಪಚಾರಿಕವಾಗಿ ಘೋಷಿಸಿದರು. ಇದರಿಂದ ಬಹುದಿನಗಳಿಂದ ನಡೆಯುತ್ತಿದ್ದ ನಾಮಕರಣ ವಿವಾದಕ್ಕೆ ತೆರೆ ಬಿದ್ದಿದೆ. ಇದೀಗ ಈ ವಿಮಾನ ನಿಲ್ದಾಣಕ್ಕೆ ಮನೋಹರ್ ಪರಿಕ್ಕರ್ ಎಂದು ಪೂರ್ತಿ ಹೆಸರಿಡಲು ನಿರ್ಣಯ ತೆಗೆದುಕೊಳ್ಳಲಾಗಿರುವುದಾಗಿ ಬಿಜೆಪಿ ಗೋವಾ ಉಸ್ತುವಾರಿ ಸಿ.ಟಿ ರವಿ ಹೇಳಿದ್ದಾರೆ. ಇದನ್ನೂ ಓದಿ: ಎಂಬಪ್ಪೆ ಜರ್ಸಿ ತೊಟ್ಟ ವಧು, ಮೆಸ್ಸಿ ಜರ್ಸಿ ತೊಟ್ಟ ವರ: ಕೇರಳದಲ್ಲೊಂದು ಫುಟ್ಬಾಲ್ ಅಭಿಮಾನಿಗಳ ಮದುವೆ