Advertisement

ಪರ್ರಿಕರ್‌ ಮತ್ತೆ ಆಸ್ಪತ್ರೆಗೆ: ಸರ್ಕಾರ ಬೀಳುವ ಆತಂಕ

06:30 AM Sep 15, 2018 | Team Udayavani |

ಪಣಜಿ: ಗೋವಾ ಸಿಎಂ ಮನೋಹರ್‌ ಪರ್ರಿಕರ್‌ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಗುರುವಾರ ಗೋವಾದ ಕಲಂಗುಟ್‌ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಬಿಜೆಪಿ ನಾಯಕರ ತಂಡವೊಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಸಂಪರ್ಕಿಸಿ, ಗೋವಾದ ರಾಜಕೀಯ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ವಿನಂತಿ ಮಾಡಿದ್ದಾರೆ ಎನ್ನಲಾಗಿದೆ.

Advertisement

ಪರ್ರಿಕರ್‌ ಆರೋಗ್ಯ ಸ್ಥಿತಿಯಲ್ಲಿ ಇದುವರೆಗೂ ಸುಧಾರಣೆ ಕಾಣದ ಕಾರಣ ಬಿಜೆಪಿ ಸೇರಿ ಮಿತ್ರಪಕ್ಷಗಳು ಗೊಂದಲಕ್ಕೆ ಸಿಲುಕುವಂತಾಗಿದೆ. ಪರ್ರಿಕರ್‌ ಕಳೆದ ಆರು ತಿಂಗಳಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿ ದ್ದಾರೆ. ಇದರಿಂದಾಗಿ ಗೋವಾ ಬಿಜೆಪಿ ಪಾಳಯ ದಲ್ಲಿ ಸಮರ್ಥ ನಾಯಕತ್ವದ ಸಮಸ್ಯೆ ಎದುರಾಗಿದೆ.ಸದ್ಯ ನಾಯಕತ್ವ ಬದಲಾವಣೆಯಾದರೆ ಗೋವಾ ಬಿಜೆಪಿ ನೇತೃತ್ವದ ಸರ್ಕಾರ ಪತನವಾಗುವ ಆತಂಕದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next