Advertisement
ಈ ಹಿಂದೆ ಇಲ್ಲಿ ಬೀದಿ ಬದಿ ವ್ಯಾಪಾರ ನಡೆಯುತ್ತಿತ್ತು. ಇಲ್ಲಿನ ಗೂಡಂಗಡಿಗಳನ್ನು ತೆರವುಗೊಳಿಸಿದ ಬಳಿಕ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಇಂಟರ್‌ಲಾಕ್ ಎದ್ದು ಹೋಗಿರುವುದರಿಂದ ರಸ್ತೆ ಸಮಾನಾಂತರವಾಗಿ ಇಲ್ಲದೆ ವಾಹನ ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಇಂಟರ್‌ಲಾಕ್ ಕುಸಿದು ಗುಂಡಿಗಳಾಗಿವೆ. ಇದರಿಂದ ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಲೂ ಸಾಧ್ಯವಾಗುತ್ತಿಲ್ಲ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೂ ಸಮಸ್ಯೆಯಾಗುತ್ತಿದೆ.
ರಸ್ತೆಯ ಬದಿಯಲ್ಲಿ ಮಾತ್ರವಲ್ಲದೆ ಫುಟ್‌ಪಾತ್‌ನಲ್ಲಿ ಅಳವಡಿಸಲಾಗಿರುವ ಇಂಟರ್‌ಲಾಕ್‌ಗಳೂ ಎದ್ದು ಹೋಗಿ ಪಾದಚಾರಿಗಳಿಗೆ ಸಮಸ್ಯೆಯಾಗಿದೆ. ಫುಟ್‌ಪಾತ್‌ನಲ್ಲಿ ಅರ್ಧ ಭಾಗಕ್ಕೆ ಚಪ್ಪಡಿ ಕಲ್ಲು ಮತ್ತು ಅರ್ಧಭಾಗಕ್ಕೆ ಇಂಟರ್‌ಲಾಕ್ ಅಳವಡಿಸಲಾಗಿದೆ. ಇಂಟರ್ ಅಳವಡಿಸಿರುವಲ್ಲಿ ಇಂಟರ್‌ಲಾಕ್ ಕುಸಿದು ಹೋಗಿದ್ದು, ಕೆಲವು ಕಡೆಗಳಲ್ಲಿ ಎದ್ದುಹೋಗಿ ಗುಂಡಿಯಾಗಿದೆ. ಇದರಿಂದಾಗಿ ನಡೆದುಕೊಂಡು ಹೋಗುವವರಿಗೆ ಸಮಸ್ಯೆಯಾಗಿದೆ. ಚಪ್ಪಡಿ ಕಲ್ಲು ಕೂಡ ಮೇಲೆ ಕೆಳಗೆ ಹೋಗಿ ಕುಸಿದು ಬೀಳುವ ರೀತಿಯಲ್ಲಿದೆ. ಶೀಘ್ರ ದುರಸ್ತಿಗೆ ಆಗ್ರಹ
Related Articles
Advertisement