ಹೊಸದಿಲ್ಲಿ: ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಮ್ ಆದ್ಮಿ ಪಕ್ಷದ ವಿರುದ್ಧ ಟೀಕೆ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಗುರಿಯಾಗಿಸಿ ಮಾತನಾಡಿದ ರಾಹುಲ್. ‘ ಮನುಷ್ಯ ಯಾವತ್ತೂ ಒಬ್ಬರ ನಿಯಂತ್ರಣದಲ್ಲಿ ಇರಬಾರದು’ ಎಂದಿದ್ದಾರೆ.
“ಸಿಎಂ ಭಗವಂತ್ ಮಾನ್ ಅವರನ್ನು ಕೇಳಬಯಸುತ್ತೇನೆ, ನೀವು ಪಂಜಾಬ್ ರಾಜ್ಯದ ಮುಖ್ಯಮಂತ್ರಿ. ಪಂಜಾಬ್ ರಾಜ್ಯದ ಆಡಳಿತವು ಪಂಜಾಬ್ ನಿಂದಲೇ ನಡೆಯಬೇಕು. ನೀವು ಕೇಜ್ರಿವಾಲ್ ಮತ್ತು ದಿಲ್ಲಿಯ ಒತ್ತಡದಲ್ಲಿ ರಾಜ್ಯ ನಡೆಸಬಾರದು” ಎಂದಿದ್ದಾರೆ.
ಇದನ್ನೂ ಓದಿ:“ಇವತ್ತು ಹಬ್ಬ ಕೆಲಸಕ್ಕೆ ಹೋಗಬೇಡ ಮಗಳೇ.. ಅಪ್ಪನ ಮಾತು ಕೇಳದೇ ಹೋದಾಕೆ ವಿಮಾನ ದುರಂತದಲ್ಲಿ ಸಜೀವ ದಹನ
“ನೀವು ಸ್ವತಂತ್ರವಾಗಿ ಕೆಲಸ ಮಾಡಬೇಕು. ನೀವು ಯಾರದೇ ನಿಯಂತ್ರಣದಲ್ಲಿದ್ದುಕೊಂಡು ಕೆಲಸ ಮಾಡಬಾರದು” ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಗಾಂಧಿ ಟೀಕೆಗೆ ಸಿಎಂ ಭಗವಂತ್ ಮಾನ್ ತಿರುಗೇಟು ನೀಡಿದ್ದಾರೆ. “ ನಾನು ಜನರಿಂದ ಮುಖ್ಯಮಂತ್ರಿ ಆದವನು. ಆದರೆ ಈ ಹಿಂದೆ ಚರಣ್ಜಿತ್ ಸಿಂಗ್ ಅವರು ರಾಹುಲ್ ಗಾಂಧಿಯಿಂದ ಸಿಎಂ ಆದವರು. ನೀವು ಕೇವಲ ಎರಡು ನಿಮಷದಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಸಿಎಂ ಹುದ್ದೆಯಿಂದ ತೆಗೆದು ಅವಮಾನ ಮಾಡಿದ್ದೀರಿ” ಎಂದು ಹೇಳಿದ್ದಾರೆ.