ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ತಮ್ಮ ಮನದಾಳದ ಮಾತುಗಳನ್ನಾಡಿದರು.
ಮಾತಿನ ಆರಂಭದಲ್ಲಿ ಅಸ್ಸಾಂ, ಗುಜರಾತ್ ಮತ್ತು ರಾಜಸ್ಥಾನದಲ್ಲಿನ ಪ್ರವಾಹದ ಕುರಿತು ಮಾತನಾಡಿ ಸರ್ಕಾರ ಸತ್ರಸ್ತ್ರರಿಗೆ ಎಲ್ಲಾ ರೀತಿ ನೆರವು ನೀಡುತ್ತಿದೆ ಎಂದರು.
ಜಿಎಸ್‌ಟಿ ಕುರಿತು ಮಾತನಾಡಿದ ಅವರು ಓರ್ವ ಸಾಮಾನ್ಯ ವ್ಯಕ್ತಿಗೂ ಇದರಿಂದ ಲಾಭವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಿದೆ. ಒಂದು ದೇಶ ಒಂದು ತೆರಿಗೆ ಜಾರಿಯಾಗಿದೆ. ಜಿಎಸ್‌ಟಿ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆ ತಂದಿದೆ.ಇದರ ಲಾಭ ಜನರಿಗೆ ಈಗಲೆ ಲಭ್ಯವಾಗುತ್ತಿದೆ. ಇದಕ್ಕಾಗಿ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಅಗಸ್ಟ್ ತಿಂಗಳು ಐತಿಹಾಸಿಕ ತಿಂಗಳು, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿವಿಧ ಹಬ್ಬಗಳು ಬಂದಿವೆ. ಹಬ್ಬಗಳನ್ನು ಪರಿಸರಕ್ಕೆ ಪೂರಕವಾಗಿ ಆಚರಿಸಲು ಕರೆ ನೀಡಿದರು.
70 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು ಈ ವರ್ಷವನ್ನು ಸಂಕಲ್ಪ ವರ್ಷವನ್ನಾಗಿ ಆಚರಿಸಬೇಕು. ನ್ಯೂ ಇಂಡಿಯಾಕ್ಕಾಗಿ ನಾವೆಲ್ಲ ಕೆಲಸ ಮಾಡಬೇಕು ಎಂದರು.
ನಮ್ಮ ಮಹಿಳಾ ಕ್ರಿಕೆಟ್‌ರ್‌ಗಳು ವಿಶ್ವಕಪ್ ಫೈನಲ್ ತಲುಪಿ ಅಮೋಘ ಸಾಧನೆ ಮಾಡಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.
ನಾವೆಲ್ಲಾ ಒಂದಾಗಿ ಮುಂದಿನ 5 ವರ್ಷಗಳ ಒಳಗೆ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು.2022 ರ ವೇಳೆಗೆ ಬಡತನ, ಭ್ರಷ್ಟಾಚಾರ, ಕೋಮುವಾದ, ಜಾತಿವಾದ ಭಾರತವನ್ನು ಬಿಟ್ಟು ಬಿಡಬೇಕು ಎಂದು ಭಾಷಣ ಮುಗಿಸಿದರು.