Advertisement

ಡಾ. ಸಿಂಗ್‌ ಪ್ರಧಾನಿ ಹುದ್ದೆಗೆ ಹೆಚ್ಚು ಅರ್ಹತೆ ಇರುವ ವ್ಯಕ್ತಿ ಎಂದಿದ್ದರು ಪ್ರಣಬ್‌

07:14 PM Aug 31, 2020 | Karthik A |

ಮಣಿಪಾಲ: ಗುಮಾಸ್ತನಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಪ್ರಣಬ್‌ ದಾ ಅವರನ್ನು ಭಾರತೀಯ ರಾಜಕೀಯದಲ್ಲಿ ವಿದ್ವತ್ಪೂರ್ಣ ಪಾತ್ರವೆಂದು ಹೇಳಲಾಗುತ್ತದೆ.

Advertisement

ಅವರು ಇತಿಹಾಸ, ರಾಜಕೀಯ ವಿಜ್ಞಾನ ಮತ್ತು ಕಾನೂನು ಪದವಿಗಳನ್ನು ಪಡೆದವರು. ಗುಮಾಸ್ತ, ಪತ್ರಕರ್ತ ಮತ್ತು ಶಿಕ್ಷಕರಾಗಿ ಕೆಲಸ ಮಾಡಿದ್ದರು. ಅನಂತರ 1969ರಲ್ಲಿ ಅವರು ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಿ ರಾಜಕೀಯಕ್ಕೆ ಪ್ರವೇಶಿಸಿದ್ದರು.

ಪ್ರಣಬ್‌ ಮುಖರ್ಜಿ ಅವರನ್ನು ವಿಪಕ್ಷದವರೂ ಗೌರವದಿಂದ ಕಾಣುತ್ತಾರೆ. ಇದಕ್ಕೆ ಕಾರಣ ಅವರಲ್ಲಿನ ಜ್ಞಾನ ಮತ್ತು ಜನಪರವಾದ ಕಾಳಜಿ.

ಗುಮಾಸ್ತ ಹುದ್ದೆಯಿಂದ ರಾಜಕೀಯದ ಉತ್ತುಂಗಕ್ಕೆ ಪ್ರಯಾಣಿಸಿದ ಪ್ರಣಬ್‌ ದಾದಾ ಅವರ ಸಾಧನೆ ಕಡಿಮೆಯೇನಲ್ಲ. ಅವರಿಗೆ ಪ್ರಧಾನಿಯಾಗುವ ಮೂರು ಅವಕಾಶಗಳಿದ್ದವು. ಆದರೆ ಅದು ಸಾಧ್ಯವಾಗಿಲ್ಲ. ಆ ಕುರಿತು ಪ್ರಣಬ್‌ ಅವರು ಎಂದೂ ಮರುಕ ಪಟ್ಟವರಲ್ಲ ಹಾಗೂ ಬಂಡಾಯವನ್ನು ತೋಡಿಕೊಂಡವರಲ್ಲ.

ಇಂದಿರಾ ಅವರ ಸಂಪುಟದಲ್ಲಿ ಅವರು ನಂ. 2
ಇಂದಿರಾ ಅವರ ಒತ್ತಾಯದ ಮೇರೆಗೆ ಪ್ರಣಬ್‌ ದಾ ಅವರು ಮೊದಲು ರಾಜ್ಯಸಭೆಯ ಮೂಲಕ ಸಂಸತ್ತನ್ನು ಪ್ರವೇಶಿಸಿದರು. ರಾಜಕೀಯದ ಕುರಿತು ಪ್ರಣಬ್‌ ಅವರಿಗೆ ಇದ್ದ ತಿಳುವಳಿಕೆ ಇಂದಿರಾ ಗಾಂಧಿ ಅವರಿಗೆ ಹೆಚ್ಚು ಆಪõಆಗಲು ಕಾರಣವಾಗಿತ್ತು. ಈ ಕಾರಣಕ್ಕಾಗಿಯೇ ಅವರು ಕ್ಯಾಬಿನೆಟ್‌ನಲ್ಲಿ ಪ್ರಣಬ್‌ ದಾ ಅವರಿಗೆ ಎರಡನೇ ಸ್ಥಾನವನ್ನು ನೀಡಿದರು.

Advertisement

ಹಾಗೆ ನೋಡಿದರೆ ಇಂದಿರಾ ಕ್ಯಾಬಿನೆಟ್‌ನಲ್ಲಿ ಘಟಾನುಘಟಿ ನಾಯಕರೇ ಇದ್ದರು. ಕ್ಯಾಬಿನೆಟ್‌ನಲ್ಲಿ ಆರ್‌.ಕೆ. ವೆಂಕಟರಮಣ, ಪಿ.ವಿ.ನರಸಿಂಹ ರಾವ್‌, ಗಿಯಾನಿ ಜೈಲ್‌ ಸಿಂಗ್‌, ಪ್ರಕಾಶ್‌ ಚಂದ್ರ ಸೇಥಿ ಮತ್ತು ನಾರಾಯಣ್‌ ದತ್‌ ತಿವಾರಿ ಪ್ರಬಲ ನಾಯಕರಾಗಿದ್ದರು. ಅವರೊಂದಿಗೆ ಇಂದಿರಾ ಅವರು ಪ್ರಣಬ್‌ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು.

ರಾಜೀವ್‌ ಸಂಪುಟದಲ್ಲಿ ಪ್ರಣಬ್‌ಗೆ ಇರಲಿಲ್ಲ ಸ್ಥಾನ
ಇಂದಿರಾ ಗಾಂಧಿ ಹತ್ಯೆಯ ಬಳಿಕ ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆ ಬಂದಾಗ ಪ್ರಣಬ್‌ ಅವರ ಮುಂಚೂನಿಯಲ್ಲಿತ್ತು. ಆದರೆ ಪಕ್ಷವು ರಾಜೀವ್‌ ಗಾಂಧಿ ಅವರನ್ನು ಆಯ್ಕೆ ಮಾಡಿತು. ಲೋಕಸಭಾ ಚುನಾವಣೆ 1984ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 414 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಪ್ರಣಬ್‌ಗ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ.

“ನಾನು ಕ್ಯಾಬಿನೆಟ್‌ನ ಭಾಗವಲ್ಲ ಎಂದು ತಿಳಿದಾಗ ನಾನು ಶಾಕ್‌ ಆಗಿತ್ತು. ನನ್ನನ್ನು ನಾನು ಸಮಧಾನ ಪಡಿಸಿಕೊಂಡೆ’ ಎಂದಿದ್ದರು. ಟಿವಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಹೆಂಡತಿಯೊಂದಿಗೆ ವೀಕ್ಷಿಸಿದ್ದರು. ಎರಡು ವರ್ಷಗಳ ನಂತರ 1986ರಲ್ಲಿ ಪ್ರಣಬ್‌ ಬಂಗಾಲದಲ್ಲಿ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್‌ (ಆರ್‌ಎಸ್‌ಸಿ) ರಚಿಸಿದರು. ಆದರೆ ಮೂರು ವರ್ಷಗಳ ಬಳಿಕ ಅವರು ರಾಜೀವ್‌ ಗಾಂಧಿ ಅವರೊಂದಿಗೆ ನಡೆದ ಮಾತುಕತೆಯ ಫ‌ಲವಾಗಿ ಆರ್‌ಎಸ್‌ಸಿ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದರು.

ರಾಜೀವ್‌ ಹತ್ಯೆ ಬಳಿಕ ಪ್ರಧಾನಿಯಾಗಲಿದ್ದರು
ರಾಜೀವ್‌ ಗಾಂಧಿ ಅವರ ಹತ್ಯೆಯಾದ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದಿತ್ತು. ಅಂದು ಪ್ರಣಬ್‌ ಮುಖರ್ಜಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಪ್ರಧಾನಿಯ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದೇನಂಬಲಾಗಿತ್ತು. ಆದರೆ ಈ ಬಾರಿಯೂ ಅವಕಾಶ ದಾದಾ ಅವರು ವಂಚಿತರಾದರು. ಪಕ್ಷವು ನರಸಿಂಹ ರಾವ್‌ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿತು. ಬಳಿಕ ಪ್ರಣಬ್‌ ದಾ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಕೆಲವು ವರ್ಷಗಳ ಬಳಿಕ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಯಿತು.

ಪ್ರಣಬ್‌ ಬದಲು ಡಾ. ಮನಮೋಹನ್‌ ಸಿಂಗ್‌
2004ರಲ್ಲಿ ಕಾಂಗ್ರೆಸ್‌ 145 ಸ್ಥಾನಗಳನ್ನು ಬಿಜೆಪಿ 138 ಸ್ಥಾನಗಳನ್ನು ಪಡೆದಿತ್ತು.ಅದನ್ನು ಬಿಜೆಪಿಯ ಸೋಲು ಎಂದು ಪರಿಗಣಿಸಲಾಯಿತು. ಈ ಹಿನ್ನೆಲೆಯಲ್ಲಿ ಸರಕಾರ ರಚಿಸಲು ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಿತ್ತು. ಯುಪಿಎ ಸಂಖ್ಯಾಬಲಕ್ಕೆ ಬಂದ ಬಳಿಕ ಸೋನಿಯಾ ಗಾಂಧಿ ಅವರಿಗೆ ಸ್ವತಃ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಸೋನಿಯಾ ಗಾಂಧಿ ಅವರು ಅವರು ಹಾಗೆ ಮಾಡಲಿಲ್ಲ. ಇದರಿಂದ ಪ್ರಣಬ್‌ ಮುಖರ್ಜಿ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ ಸೋನಿಯಾ ಅವರು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದ್ದರು.

ಮನಮೋಹನ್‌ ಅವರ ಸಂಪುಟದಲ್ಲಿ ನಂಬರ್‌ 2
2012ರ ವರೆಗೆ, ಡಾ. ಮನಮೋಹನ್‌ ಸಿಂಗ್‌ ಅವರ ಸಂಪುಟದಲ್ಲಿ ಮುಖರ್ಜಿ ನಂಬರ್‌ 2 ಸ್ಥಾನದಲ್ಲಿದ್ದರು. ಪ್ರಣಬ್‌ ದಾ ಅವರು 2004ರಿಂದ 2006ರ ವರೆಗೆ, 2006ರಿಂದ 2009ರ ವರೆಗೆ ವಿದೇಶಾಂಗ ಸಚಿವಾಲಯ ಮತ್ತು 2009ರಿಂದ 2012ರ ವರೆಗೆ ಹಣಕಾಸು ಸಚಿವಾಲಯವನ್ನು ನಿರ್ವಹಿಸಿದ್ದರು. ಈ ಸಮಯದಲ್ಲಿ ಅವರು ಲೋಕಸಭೆಯಲ್ಲಿ ಸದನದ ನಾಯಕರಾಗಿದ್ದರು. 2012ರಲ್ಲಿ ಪಿಎ ಸಂಗ್ಮಾ ಅವರನ್ನು ಸೋಲಿಸುವ ಮೂಲಕ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಒಟ್ಟು ಮತಗಳಲ್ಲಿ ಶೇ. 70 ಮತಗಳನ್ನು ಪಡೆದಿದ್ದರು.

ಆದರೆ ತನಗೆ ಪ್ರಧಾನಿ ಪಟ್ಟ ತಪ್ಪಿದ ಕುರಿತು ಮುಖರ್ಜಿ ಅವರಿಗೆ ಯಾವುದೇ ಬೇಸರ ಇರಲಿಲ್ಲ. ಅವರೇ ಈ ಹಿಂದೆ ಹೇಳಿದಂತೆ “ನಾನು ಪ್ರಧಾನಿಯಾಗದ ಬಗ್ಗೆ ಯಾವುದೇ ಬೇಸರ ಮನಸ್ಸಿನಲ್ಲಿಲ್ಲ. ಡಾ. ಮನಮೋಹನ್‌ ಸಿಂಗ್‌ ಅವರು ಈ ಹುದ್ದೆಗೆ ಹೆಚ್ಚು ಅರ್ಹ ವ್ಯಕ್ತಿ.’ ಎಂದಿದ್ದರು.
ಆದರೆ ಡಾ. ಮನಮೋಹನ್‌ ಸಿಂಗ್‌ ಅವರು ಹೇಳುವ ಪ್ರಕಾರ “ಪ್ರಣಬ್‌ ನನಗಿಂತ ಹೆಚ್ಚು ಅರ್ಹತೆ ಹೊಂದಿದ ವ್ಯಕ್ತಿಯಾಗಿದ್ದರು. ಆದರೆ ಸೋನಿಯಾ ಗಾಂಧಿ ಅವರು ನನ್ನನ್ನು ಆಯ್ಕೆ ಮಾಡಿಕೊಂಡರು’ ಎಂದಿದ್ದರು. ಪ್ರಣಬ್‌ ಅವರ ಆತ್ಮಚರಿತ್ರೆ ಬಿಡುಗಡೆಯಾದ ಸಂದರ್ಭದಲ್ಲಿ ಮನಮೋಹನ್‌ ಸಿಂಗ್‌ ಅವರು ಈ ಮಾತನ್ನು ಹೇಳಿದ್ದರು. ಈ ಸಮಾರಂಭದಲ್ಲಿ ಸೋನಿಯಾ ಮತ್ತು ರಾಹುಲ್‌ ಗಾಂಧಿ ಅವರೂ ಇದ್ದರು. ಮನಮೋಹನ್‌ ಸಿಂಗ್‌ ಅವರ ಮಾತನ್ನು ಕೇಳಿದ ತಾಯಿ-ಮಗ ಮುಗುಳ್ನಕ್ಕಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next