Advertisement

89ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಪಿಎಂ ಮನಮೋಹನ್‌ ಸಿಂಗ್‌

05:32 PM Sep 26, 2021 | Team Udayavani |

ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಭಾನುವಾರ 89ನೇ ವರ್ಷಕ್ಕೆ ಕಾಲಿರಿಸಿದ್ದಾರೆ.ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಪ್ರಮುಖರು ಶುಭ ಹಾರೈಸಿದ್ದಾರೆ.

Advertisement

“ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಹುಟ್ಟಿದ್ದ ಹಬ್ಬದ ಶುಭಾಷಯಗಳು. ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯಸ್ಸು ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮನಮೋಹನ್‌ ಸಿಂಗ್‌ ಅವರನ್ನು “ದೇಶದ ವಿಚಾರಗಳು ಮತ್ತು ಅರ್ಥ ಮಾಡಿಕೊಂಡ ಅಂಜಿಕೆ ರಹಿತ, ಬುದ್ಧಿವಂತ ನಾಯಕ’ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ:ಹೈದರಾಬಾದ್‌- ಬೆಂಗಳೂರು ಬುಲೆಟ್‌ ಟ್ರೈನ್‌ಗೆ ವಿಶ್ವಬ್ಯಾಂಕ್‌ ನೆರವು

ನೆನಪು ಹಂಚಿಕೊಂಡ ನೂಯಿ:
ಇದೇ ವೇಳೆ, ಪೆಪ್ಸಿ ಕಂಪನಿಯ ನಿವೃತ್ತ ಸಿಇಒ ಇಂದ್ರಾ ನೂಯಿ ಕೂಡ ಮಾಜಿ ಪ್ರಧಾನಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. 2009ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್‌ ಒಬಾಮ, ಪ್ರಧಾನಿಯಾಗಿದ್ದ ಡಾ.ಮನಮೋಹನ್‌ ಸಿಂಗ್‌ ವಾಷಿಂಗ್ಟನ್‌ನಲ್ಲಿ ಭೇಟಿಯಾಗಿದ್ದ ವೇಳೆ “ನೂಯಿ ನಮ್ಮವರು’ ಎಂದು ಇಬ್ಬರೂ ಹೇಳಿಕೊಂಡಿದ್ದರಂತೆ. ಈ ಅಂಶ ಮುಂದಿನ ಮಂಗಳವಾರ ಬಿಡುಗಡೆಯಾಗಲಿರುವ ಅವರ ಪುಸ್ತಕ “ಮೈ ಲೈಫ್ ಇನ್‌ ಫ‌ುಲ್‌: ವರ್ಕ್‌, ಫ್ಯಾಮಿಲಿ, ಆ್ಯಂಡ್‌ ಅವರ್‌ ಫ್ಯೂಚರ್‌’ ಪುಸ್ತಕದಲ್ಲಿ ಉಲ್ಲೇಖಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next