Advertisement

2 ಜಿ ಹಗರಣದ ಆರೋಪಿಗಳು ಖುಲಾಸೆ: ಡಾ ಸಿಂಗ್‌ ಸಂತಸ 

02:13 PM Dec 21, 2017 | Team Udayavani |

ಹೊಸದಿಲ್ಲಿ : 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದ ಎಲ್ಲಾ 17 ಮಂದಿ  ಆರೋಪಿಗಳನ್ನು ಪಟಿಯಾಲ ಹೌಸ್‌ನ ವಿಶೇಷ ಕೋರ್ಟ್‌ ಖುಲಾಸೆಗೊಳಿಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ತೀರ್ಪನ್ನು ಸಮರ್ಥಿಸಿ ಸಂಭ್ರಮ ವ್ಯಕ್ತ ಪಡಿಸಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸಿಂಗ್‌ ‘ಅಂದಿನ ಯುಪಿಎ ಸರ್ಕಾರದ ವಿರುದ್ಧ ಯಾವುದೇ ಆಧಾರಗಳಿಲ್ಲದೆ ನಿರಂತರ ಆರೋಪಗಳನ್ನು ಮಾಡಲಾಗಿತ್ತು’ ಎಂದರು. 

2 ಜಿ ಹಗರಣವನ್ನೆ  ಬಿಜೆಪಿ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು  ಹೋರಾಟ ನಡೆಸಿತ್ತು. ಸ್ವಚ್‌ಛ ಮತ್ತು ವಿಧೇಯ ವ್ಯಕ್ತಿಯಾಗಿರುವ ಡಾ.ಮನಮೋಹನ್‌ ಸಿಂಗ್‌ ಅವರು ಭಾರೀ ಹಗರಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎಂದು ಆರೋಪಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next