Advertisement

Wheelchairನಲ್ಲಿ ಸದನಕ್ಕೆ ಬಂದ ಮನಮೋಹನ್ ಸಿಂಗ್:ಕಾಂಗ್ರೆಸ್ ಗೆ ನಾಚಿಕೆಯಾಗಬೇಕು ಎಂದ ಬಿಜೆಪಿ

11:05 AM Aug 08, 2023 | keerthan |

ಹೊಸದಿಲ್ಲಿ: ಬಹುನಿರೀಕ್ಷಿತ ದಿಲ್ಲಿ ಸೇವೆಗಳ ಮಸೂದೆಯನ್ನು ಸೋಮವಾರ ರಾಜ್ಯಸಭೆಯಲ್ಲಿ ಮತಕ್ಕೆ ಹಾಕಲಾಗಿದೆ. ಬರೋಬ್ಬರಿ ಐದೂವರೆ ಗಂಟೆಗಳ ಕಾಲ ನಡೆದ ವಾಕ್ಸಮರದ ಬಳಿಕ ಮಸೂದೆ ಕೇಂದ್ರ ಸರ್ಕಾರದ ಪರವಾಗಿದೆ. ಮತದಾನದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಸಭೆ ಕಲಾಪದಲ್ಲಿ ಭಾಗವಹಿಸಿದರು.

Advertisement

ಅನಾರೋಗ್ಯದಿಂದ ಬಳಲುತ್ತಿರುವ ಜೆಎಂಎಂನ ಸಿಭು ಸೊರೆನ್ ಅವರನ್ನು ಸದನಕ್ಕೆ ಕರೆತರಲಾಗಿತ್ತು. 91 ವರ್ಷದ ಮನಮೋಹನ್ ಸಿಂಗ್ ಅವರನ್ನು ವ್ಹೀಲ್ ಚೇರ್ ನಲ್ಲಿ ಕರೆತರಲಾಯಿತು. ಆದರೆ ಇದಕ್ಕೆ ಬಿಜೆಪಿ ಟೀಕೆ ಮಾಡಿದೆ.

ವ್ಲೀಲ್ ಚೇರ್ ನಲ್ಲಿ ಅವರನ್ನು ಕರೆದು ತಂದ ನಡೆಗೆ ಬಿಜೆಪಿ ಟೀಕೆ ಮಾಡಿದ್ದು, ಕಾಂಗ್ರೆಸ್ ನದ್ದು ನಾಚಿಕೆಗೇಡಿನ ನಡೆ ಎಂದು ಕರೆದಿದೆ.

ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅಸ್ವಸ್ಥ ನಾಯಕನನ್ನು ರಾಜ್ಯಸಭೆಗೆ ಬರುವಂತೆ ಮಾಡಿದ ಹುಚ್ಚುತನವನ್ನು ರಾಷ್ಟ್ರವು ಮರೆಯುವುದಿಲ್ಲ ಎಂದು ಹೇಳಿದರು.

Advertisement

ರಾಷ್ಟ್ರೀಯ ರಾಜಧಾನಿಯಲ್ಲಿ ಅಧಿಕಾರಶಾಹಿಯ ಮೇಲೆ ಕೇಂದ್ರದ ನಿಯಂತ್ರಣವನ್ನು ನೀಡುವ ವಿವಾದಾತ್ಮಕ ದೆಹಲಿ ಸೇವೆಗಳ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದೆ.

ಮತದಾನದಲ್ಲಿ ಸರಕಾರದ ಪರವಾಗಿ 131 ಮತಗಳು ಚಲಾವಣೆಯಾದರೆ, ಕಾಂಗ್ರೆಸ್‌ ನೇತೃತ್ವದ ಐ.ಎನ್‌.ಡಿ.ಐ.ಎ. ಒಕ್ಕೂಟದ ಪರವಾಗಿ 102 ಮತಗಳು ಬಿದ್ದಿವೆ. ಕೇಂದ್ರ ಸರಕಾರದ ಪರವಾಗಿ ಬಿಜು ಜನತಾ ದಳ, ಟಿಡಿಪಿ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದರು ಮತ ಹಾಕಿದ್ದಾರೆ. ಇದರಿಂದಾಗಿ ದಿಲ್ಲಿ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಮತ್ತು ಅವರ ಸೇವೆಗೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ಸರಕಾರದ ಮಾತು ಅಂತಿಮವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next