ಶಿರಸಿ: ದೇಶದಲ್ಲಿ ಏನಾಗುತ್ತಿದೆ ಎಂಬ ಸಂಗತಿಗಳನ್ನು ಮಾಧ್ಯಮಗಳು ಸತ್ಯ ತಿಳಿಸಬೇಕು. ಇಲ್ಲವಾದರೆ ಪ್ರಜಾಪ್ರಭುತ್ವ ಕೊನೆ ಕಾಣುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರತಿಪಾದಿಸಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿ, ದೆಹಲಿಯಲ್ಲಿ ಏನಾಗುತ್ತಿದೆ, ಬೆಲೆ ಏರಿಕೆ ಸೇರಿದಂತೆ ಅನೇಕ ಸಂಗತಿ ತಿಳಿಸಬೇಕು. ಕಿರಾಣಿ ತರಲೂ ಆಗದಷ್ಟು ಕೇಂದ್ರ ಸಮಸ್ಯೆ ಮಾಡಿದೆ. ಬಡವರ ಬದುಕು ದುಸ್ತಿರ ಆಯಿತೆಂದು ಕಾಂಗ್ರೆಸ್ ಸರಕಾರ ಗ್ಯಾರೆಂಟಿ ತಂದು ನೆರವಿಗೆ ಬಂದಿದೆ ಎಂದರು.
ಕಳೆದ ಚುನಾವಣೆಯಲ್ಲಿ ನೀಡಿದ ಬಿಜೆಪಿ ಆಶ್ವಾಸನೆ ಈಡೇರಿಲ್ಲ. ಆದರೆ, ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸಿದೆ. ಶೆ.99 ಜನರಿಗೆ ಐದೂ ಗ್ಯಾರೆಂಟಿ ನೀಡಿದ್ದೇವೆ. ಆಶ್ವಾಸನೆ ನೀಡಿದ್ದಕ್ಕೆ 44 ಶೇಕಡಾ ಮತ ಹಾಕಿದಾರೆ. ಐದೂ ಭಾಗ್ಯ ಅನುಷ್ಠಾನ ಬಂದ ಬಳಿಕ ಮತ್ತೆ ಮತ ಹಾಕಲ್ವಾ? ಕೇವಲ ಎರಡರಿಂದ ನಾಲ್ಕು ಶೇ. ಮತ ಬಂದರೆ ನಾವು ಈ ಸಲ 24-26 ಸ್ಥಾನ ಗೆಲುವು ಸಾಧ್ಯವಿದೆ ಎಂದರು.
ಆರು ಜನ ಮಹಿಳೆಯರಿಗೆ ಅವಕಾಶ ನೀಡಿದ್ದೇವೆ. ಈ ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ. ಮತ ಕೇಳಲೂ ನಮಗೆ ಆತ್ಮಸ್ಥೈರ್ಯ ಉಂಟಾಗಿದೆ. ಎಲ್ಲರೂ ಕಾಂಗ್ರೆಸ್ ಪರ ಚಿತ್ತ ಹರಿಸಿದ್ದಾರೆ. ನಾವೂ ರಾಮನ ಭಕ್ತರೇ. ಒಬ್ಬರೀಗೇ ಅಡ ಇಟ್ಟಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಮನ ತರಬಾರದಿತ್ತು. ರಾಮನ ದೇಗುಲ ಪೂರ್ಣ ಆದ ಬಳಿಕ ಮಾಡಬೇಕಿತ್ತು ಎಂದರು.
ಹಿಂದೆ ರಾಜ ಪ್ರಭುತ್ವ, 1947 ರ ನಂತರ ಮತದಾನದ ಮೌಲ್ಯ ಕೊಟ್ಟು , ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ಆ ಕೊಡುಗೆಯಿಂದ ಪ್ರಧಾನಿಗಳಾಗಿ ಮೋದಿ ಕೂಡ ಆಗಿದ್ದಾರೆ. ಆದರೆ ಇಂದು ಕೇಂದ್ರದಿಂದ ಚುನಾಯಿತ ರಾಜ್ಯ ಸರಕಾರ ಉರುಳಿಸುವ ಪ್ರಯತ್ನ ಮಾಡಲಾಗುತ್ತದೆ. ತಮ್ಮ ಪಕ್ಷ ಅಲ್ಲ ಎಂಬ ಕಾರಣಕ್ಕೆ ತೊಂದರೆ ಕೊಡುತ್ತಾರೆ ಎಂದ ಅವರು, ಬೇರೆ ಪಕ್ಷದಲ್ಲಿ ಇದ್ದಾಗ ಹಳಿಸುವದು, ಅವರ ಪಕ್ಷಕ್ಕೆ ಹೋದಾಗ ವಾಶಿಂಗ್ ಪೌಡರ್ ಹಾಕಿ ಇಂದ್ರ ಚಂದ್ರ ಮಾಡುತ್ತಾರೆ ಎಂದೂ ಟಾಂಗ್ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ರಾಜ್ಯ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಜವಬ್ದಾರಿ ಜೊತೆ ಮಲೆನಾಡು, ಕರಾವಳಿ ಜವಬ್ದಾರಿ ನೀಡಿದ್ದಾರೆ. ಪಕ್ಷದ ಸಂಘಟನೆ ಜೊತೆ ಎಲ್ಲ ವಿವಿಧ ಘಟಕಗಳ ಸಂಘಟನೆಗೆ ಒತ್ತು ನೀಡುವ ಕಾರ್ಯ ಮಾಡುತ್ತಿದ್ದೇವೆ. ಪಕ್ಷದ ಸಂಘಟನೆ ಜೊತೆ ಚುನಾವಣಾ ಮಹತ್ವ ಕೆಲಸ ಮಾಡುತ್ತಿದ್ದೇವೆ ಎಂದರು.
ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ, ಪ್ರಮುಖರಾದ ಸತೀಶ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ, ಅಬ್ಬಾಸ ತೋನ್ಸೆ, ನಾಗರಾಜ ನಾರ್ವೇಕರ್ ಇದ್ದರು.
ಇದನ್ನೂ ಓದಿ: ಪತ್ನಿಯನ್ನು ಕೊಂದು ವಾರಗಳ ಕಾಲ ಮನೆಯಲ್ಲಿಟ್ಟು ದೇಹವನ್ನು 200 ತುಂಡು ಮಾಡಿ ನದಿಗೆಸೆದ ಪತಿ