Advertisement

ಕೇಜ್ರಿವಾಲ್ ರನ್ನು ಸೋಲಿಸಲು ಅಸಾಧ್ಯ, ಅದಕ್ಕೆ ಬಿಜೆಪಿ ಕೊಲ್ಲಲು ಬಯಸುತ್ತಿದೆ: ಸಿಸೋಡಿಯಾ

08:51 AM Mar 31, 2022 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಕುರಿತು ಕೇಜ್ರಿವಾಲ್ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.

Advertisement

ಚಿತ್ರದಲ್ಲಿ ತೋರಿಸಿರುವ ಕಾಶ್ಮೀರಿ ಹಿಂದೂಗಳ “ಹತ್ಯಾಕಾಂಡ” ವನ್ನು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ ಎಂದು ಬಿಜೆಪಿ ಪಕ್ಷದ ನಾಯಕರು ಆರೋಪಿಸಿದ್ದಾರೆ.

ದಾಳಿಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಎಎಪಿ ಹಿರಿಯ ನಾಯಕ ಮನೀಶ್ ಸಿಸೋಡಿಯಾ, ಬಿಜೆಪಿಗೆ ಕೇಜ್ರಿವಾಲ್ ಅವರನ್ನು ಅವರನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಅವರನ್ನು “ಕೊಲ್ಲಲು” ಬಯಸುತ್ತದೆ” ಎಂದು ಹೇಳಿದರು. ರಾಜಕೀಯವು ಕೇವಲ ಕಾರಣವಷ್ಟೇ ಮತ್ತು ಇದು ಸ್ಪಷ್ಟ ಕ್ರಿಮಿನಲ್ ಪ್ರಕರಣವಾಗಿದೆ ಎಂದು ಅವರು ಹೇಳಿದರು.

“ಇಂದು, ಬಿಜೆಪಿಯ ಗೂಂಡಾಗಳು ಪೊಲೀಸರ ಸಮ್ಮುಖದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ದಾಳಿ ಮಾಡಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಅವರು ಅವರನ್ನು ಕೊಲ್ಲಲು ಬಯಸಿದ್ದಾರೆ” ಎಂದು ಸಿಸೋಡಿಯಾ ಹೇಳಿದರು.

ಇದನ್ನೂ ಓದಿ:ಎಲ್ಲ ಕಾರುಗಳಲ್ಲೂ 6 ಏರ್‌ಬ್ಯಾಗ್‌ ಕಡ್ಡಾಯ? ಸಚಿವ ನಿತಿನ್‌ ಗಡ್ಕರಿ

Advertisement

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಮುಖ್ಯಮಂತ್ರಿ ಮನೆಗೆ ತಲುಪಲು ಅವಕಾಶ ನೀಡುವ ಮೂಲಕ ದೆಹಲಿ ಪೊಲೀಸರು ವಿಧ್ವಂಸಕ ಕೃತ್ಯ ಮತ್ತು ಹಿಂಸಾಚಾರವನ್ನು ಸುಗಮಗೊಳಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಹಲವಾರು ಹಿರಿಯ ನಾಯಕರು ಆರೋಪಿಸಿದ್ದಾರೆ.

ಬಿಜೆಪಿ ಧ್ವಜಗಳು ಮತ್ತು ಕಾಶ್ಮೀರಿ ಪಂಡಿತರಿಗೆ “ಅವಮಾನ” ವನ್ನು ಖಂಡಿಸುವ ಫಲಕಗಳನ್ನು ಹೊತ್ತ ಜನರ ದೊಡ್ಡ ಗುಂಪು ಮುಖ್ಯಮಂತ್ರಿಯ ನಿವಾಸದ ಹೊರಗೆ ಹಾಕಲಾದ ಬ್ಯಾರಿಕೇಡ್‌ನಲ್ಲಿ ಪೊಲೀಸರೊಂದಿಗೆ ಘರ್ಷಣೆ ಮಾಡುವುದನ್ನು ವಿಡಿಯೋಗಳಲ್ಲಿ ದಾಖಲಾಗಿದೆ. ಅವರಲ್ಲಿ ಹಲವರು ಭದ್ರತಾ ಕಾರ್ಡನ್ ಮೂಲಕ ಜಿಗಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

ದೆಹಲಿ ವಿಧಾನಸಭೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಅವರು ಮಾಡಿದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾದ ಸುಮಾರು 150-200 ಪ್ರತಿಭಟನಾಕಾರರು ಬೆಳಿಗ್ಗೆ 11:30 ರ ಸುಮಾರಿಗೆ ಸಿಎಂ ಅವರ ನಿವಾಸಕ್ಕೆ ಆಗಮಿಸದ್ದರು. ತಕ್ಷಣ ಅವರನ್ನು ಸ್ಥಳದಿಂದ ಹೊರಹಾಕಲಾಯಿತು ಮತ್ತು ಸುಮಾರು 70 ಜನರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next