ಹೊಸದಿಲ್ಲಿ/ಇಂಫಾಲ: ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯ ವಿಲ್ಲ. ಅದೇನಿದ್ದರೂ ರಾಜ್ಯ ಸರಕಾರದ ಹೊಣೆಯಾ ಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಮಾತುಗಳನ್ನಾಡಿದೆ. ರಾಜ್ಯದಲ್ಲಿ ಹಿಂಸಾಕೃತ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನ್ಯಾಯಾಲಯದ ಹೆಸರು ಬಳಕೆ ಮಾಡಿಕೊಳ್ಳಲೇಬೇಡಿ ಎಂದು ಖಡಕ್ ಆಗಿ ಹೇಳಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ನಿರ್ದೇಶನಗಳನ್ನು ಮಾತ್ರ ನೀಡಲು ಸಾಧ್ಯವಿದೆ ಎಂದಿತು.
ಹೊಸ ವರದಿ ಸಲ್ಲಿಕೆ: ಇದೇ ನ್ಯಾಯಪೀಠದ ಮುಂದೆ ಮಣಿಪುರ ಮುಖ್ಯ ಕಾರ್ಯದರ್ಶಿ ರಾಜ್ಯದಲ್ಲಿನ ಘಟನೆಗಳ ಬಗ್ಗೆ ಹೊಸ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅದರ ಪ್ರಕಾರ 142 ಮಂದಿ ಅಸುನೀಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ 6,745 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
5,995 ಎಫ್ಐಆರ್ ಸಲ್ಲಿಸಲಾಗಿದೆ. ಬೆಂಕಿ ಹಚ್ಚುವುದು, ದೊಂಬಿಯ 5 ಸಾವಿರ ಘಟನೆಗಳು ನಡೆದಿವೆ ಎಂದು ಉಲ್ಲೇಖಿಸಿದ್ದಾರೆ.
ನಾಗರಿಕ ಸಾವು: ಇದೇ ವೇಳೆ ಹೊಸ ಹಿಂಸಾಚಾರದ ಲ್ಲಿ ನಾಗರಿಕ ಅಸುನೀಗಿದ್ದಾನೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಇಂಫಾಲ ಪಶ್ಚಿಮ ಜಿಲ್ಲೆ ಮತ್ತು ಕಾಂಗ್‌ಪೋಕಿ³ ಜಿಲ್ಲೆಯ 2 ಗ್ರಾಮಗಳಲ್ಲಿ ಈ ಘಟನೆ ನಡೆದಿದೆ. ಎರಡು ಜಿಲ್ಲೆಗಳ 2 ಗ್ರಾಮಗಳಲ್ಲಿ ಏಕಾಏಕಿ ಗುಂಡಿನ ಹಾರಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಅಸ್ಸಾಂ ರೈಫಲ್ಸ್ ಅಧಿ ಕಾರಿಗಳ ಪ್ರಕಾರ ಇನ್ನೂ ಹೆಚ್ಚಿನ ಸಾವು ನೋವು ಉಂಟಾಗುವ ಸಾಧ್ಯತೆಗಳು ಇವೆ. ಮೈತೇಯಿ ಸಮುದಾಯ ಶೇ.53ರಷ್ಟು ಇದ್ದು, ಇಂಫಾಲ ಕಣಿವೆಯಲ್ಲಿದ್ದರೆ, ನಾಗಾ ಮತ್ತು ಕುಕಿ ಸಮು ದಾಯ ಶೇ.40 ಇದ್ದು ಗುಡ್ಡಗಾಡು ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.