Advertisement

Manipur: ಶಸ್ತ್ರಾಸ್ತ್ರಗಳ ವರದಿಗೆ ಸುಪ್ರೀಂ ಸೂಚನೆ

12:02 AM Sep 07, 2023 | Team Udayavani |

ಹೊಸದಿಲ್ಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಎಲ್ಲ ಮೂಲ ಗಳಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಮಪುರ ಸರಕಾರ ಮತ್ತು ತನಿಖಾ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ. ಸಿಜೆಐ ಡಿ.ವೈ. ಚಂದ್ರಚೂಡ್‌, ನ್ಯಾ| ಜೆ.ಬಿ.ಪಡಿವಾಲ ಮತ್ತು ನ್ಯಾ| ಮನೋಜ್‌ ಮಿಶ್ರಾ ಅವರ ನ್ನೊಳಗೊಂಡ ನ್ಯಾಯಪೀಠ ಈ ಸೂಚನೆ ನೀಡಿತು. ಇದೇ ವೇಳೆ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಆಹಾರ, ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ಯಾವುದೇ ಕೊರತೆ ಆಗಿಲ್ಲ ಎಂದು ಮಣಿಪುರ ಸರಕಾರದ ಮುಖ್ಯ ಕಾರ್ಯದರ್ಶಿ ಅಫಿಡವಿಟ್‌ ಸಲ್ಲಿಸಿದರು. “ಮೊರೆ ಜಿಲ್ಲೆಯಲ್ಲಿ ದಡಾರಾ ಮತ್ತು ಸಿಡುಬು ರೋಗ ವ್ಯಾಪಿಸಿದೆ. ಇದರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಔಷಧಗಳನ್ನು ಸರಬರಾಜು ಮಾಡ ಲಾಗಿದೆ. ಜತೆಗೆ 9 ಶಿಬಿರಗಳಲ್ಲಿ ಇರುವ ಸಂತ್ರಸ್ತರಿಗೆ ದಿನಸಿ ಪದಾರ್ಥಗಳನ್ನು ಸರಬರಾಜು ಮಾಡಲಾಗಿದೆ’ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

Advertisement

ಬಲವಂತದ ಕ್ರಮ ಬೇಡ:
ಮಣಿಪುರ ಗಲಭೆ ಕುರಿತು ಪ್ರಕಟಿಸಿರುವ ವರದಿಗೆ ಸಂಬಂಧಿಸಿದಂತೆ ಭಾರತೀಯ ಸಂಪಾದಕರ ಒಕ್ಕೂಟದ ನಾಲ್ವರು ಸದಸ್ಯರ ವಿರುದ್ಧ ದಾಖಲಾಗಿರುವ ಎರಡು ಎಫ್ಐಆರ್‌ಗಳ ಅನ್ವಯ, ಅವರ ವಿರುದ್ದ ಸೆ. 11ರ ವರೆಗೆ ಯಾವುದೇ ಬಲವಂತದ ಕ್ರಮ ತೆಗೆದು ಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಸೇನಾ ಬ್ಯಾರಿಕೇಡ್‌ಗಳ ತೆರವಿಗೆ ಆಗ್ರಹ:
ಬಿಷ್ಣುಪುರ ಜಿಲ್ಲೆಯ ಫೌಗಕ್ಚಾವೊ ಇಕೈನಲ್ಲಿ ಭದ್ರತಾ ಪಡೆಗಳು ಅಳವಡಿ ಸಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿ ಸುವಂತೆ ಆಗ್ರಹಿಸಿ ನೂರಾರು ಸಂಖ್ಯೆ ಯಲ್ಲಿ ಪ್ರತಿಭಟನಕಾರರು ಬುಧ
ವಾರ ಜಮಾಯಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next